ಚಾಮರಾಜನಗರ:ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆಪ್ತಮೂಲಗಳು ಈಟಿವಿ ಭಾರತಕ್ಕೆ ಖಚಿತ ಪಡಿಸಿವೆ.
ಸಂಸದ ವಿ.ಶ್ರೀಗೆ ಕೊರೊನಾ: ಮಣಿಪಾಲ ಆಸ್ಪತ್ರೆಗೆ ಶಿಫ್ಟ್ - ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್
ಚಾಮರಾಜನಗರ ಜಿಲ್ಲೆಯ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದುಬಂದಿದೆ.
ವಿ.ಶ್ರೀನಿವಾಸಪ್ರಸಾದ್
ಇಂದು ಮಧ್ಯಾಹ್ನ 12 ಕ್ಕೆ ಸಂಸದರ ಕೊರೊನಾ ರಿಪೋರ್ಟ್ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ಖಾತ್ರಿಯಾದ ಹಿನ್ನೆಲೆ, ಜೀರೋ ಟ್ರಾಫಿಕ್ ಮೂಲಕ ಮಣಿಪಾಲ್ ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದುಬಂದಿದೆ.
ಸಂಸದರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.