ಚಾಮರಾಜನಗರ:ಕ್ಲೋಸ್ ಡೌನ್ ಅವಧಿಯಲ್ಲೂ ಮಹಾಮಾರಿ ಹೆಚ್ಚಾಗುತ್ತಿದ್ದು, ಇಂದು ಬರೋಬ್ಬರಿ 611 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4017ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದಲ್ಲಿಂದು 611 ಹೊಸ ಕೇಸ್, 9 ಮಂದಿ ಸಾವು - ಕೊರೊನಾಗೆ ಸಾವು
ಇಂದು ಬರೋಬ್ಬರಿ 611 ಮಂದಿಗೆ ಸೋಂಕು ದೃಢಪಟ್ಟಿದ್ದು, 9 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
![ಚಾಮರಾಜನಗರದಲ್ಲಿಂದು 611 ಹೊಸ ಕೇಸ್, 9 ಮಂದಿ ಸಾವು chamarajanagara corona update](https://etvbharatimages.akamaized.net/etvbharat/prod-images/768-512-11676997-669-11676997-1620394582141.jpg)
chamarajanagara corona update
ಇಂದು 386 ಮಂದಿ ಗುಣಮುಖರಾಗಿದ್ದಾರೆ. 50 ಮಂದಿ ಐಸಿಯುನಲ್ಲಿದ್ದು, 2,989 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 7,332 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಇಂದು 9 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರ ಸಾವಿನ ಒಟ್ಟು ಸಂಖ್ಯೆ 220ಕ್ಕೆ ಏರಿಕೆಯಾಗಿದೆ.