ಚಾಮರಾಜನಗರ:ನ್ಯಾಯಾಧೀಶರು ಚಾಮರಾಜನಗರದ ಸಿಇಎನ್ ಠಾಣೆ ಭೇಟಿಗೆ ಬಂದಿದ್ದ ವೇಳೆ ಬಾಗಿಲು ಮುಚ್ಚಿದ್ದರಿಂದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು ಮಾಡಲಾಗಿದೆ. ಸಿಇಎನ್ (ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ತಡೆ) ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಅಮಾನತುಗೊಂಡವರು.
ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ಸಿಇಎನ್ ಪೊಲೀಸ್ ಠಾಣೆಗೆ ಕಳೆದ 3ರಂದು ದಿಢೀರ್ ಭೇಟಿ ನೀಡಿದ್ದರು. ಆ ವೇಳೆ ಠಾಣೆಯಲ್ಲಿ ಯಾರೂ ಇಲ್ಲದೇ, ಜೊತೆಗೆ ಬಾಗಿಲು ಹಾಕಿದ್ದರಿಂದ 'ಈ ರೀತಿ ಠಾಣೆಗೆ ಬಾಗಿಲು ಹಾಕಿಕೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ, ಠಾಣೆಯೇ ಬಾಗಿಲು ಹಾಕಿಕೊಂಡಿದ್ದರೆ ದೂರು ಕೊಡಲು ಬರುವವರು ಏನು ಮಾಡಬೇಕೆಂದು' ಎಸ್ಪಿಗೆ ತಮ್ಮ ಭೇಟಿಯ ಬಗ್ಗೆ ವರದಿ ಕೊಟ್ಟಿದ್ದರು.