ಚಾಮರಾಜನಗರ :ಮದುವೆ ಎಂದರೆ ಸಂಭ್ರಮ, ಸಡಗರ. ನೀವು ಬನ್ನಿ- ಮನೆಯವರನ್ನೂ ಕರೆತನ್ನಿ ಎಂದು ಕರೆಯುವುದು ಸಾಮಾನ್ಯ. ಆದರೆ, ಇಲ್ಲೊಂದು ಜೋಡಿ ಕೊರೊನಾದಿಂದಾಗಿ ಮದುವೆಗೆ ಬರಬೇಡಿ ಎಂಬ ಕರೆಯೋಲೆ ಹಂಚಿದ್ದಾರೆ.
ಮದುವೆ ಬರದೆ ದೂರದಿಂದಲೇ ಆಶೀರ್ವಾದ ಮಾಡುವಂತೆ ಮನವಿ ಮಾಡಿರುವ ವಧು-ವರ ತಾಲೂಕಿನ ಚೆನ್ನಪ್ಪನಪುರ ಗ್ರಾಮದ ಶ್ರೇಯಸ್ ಹಾಗೂ ವಿ.ಸಿ.ಹೊಸೂರಿನ ಸುಷ್ಮಾ ಅವರ ವಿವಾಹವು ಬಹಳ ಹಿಂದೆಯೇ ನಿಗದಿಯಾಗಿತ್ತು. ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗಿತ್ತು.
ಆದರೆ, ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೊಂದು ಕರೆಯೋಲೆಯನ್ನು ವಧು-ವರರ ಕುಟುಂಬ ಹೊರಡಿಸಿದೆ. ಮನೆಯಲ್ಲೇ ಇದ್ದು ತಮಗೆ ಆಶೀರ್ವಾದ ಮಾಡಬೇಕೆಂಬ ಪತ್ರಿಕೆಗಳನ್ನು ಹಂಚುತ್ತಿದ್ದಾರೆ.
ಜನವರಿ 22-23 ಇವರಿಬ್ಬರ ವಿವಾಗ ನಿಶ್ಚಯವಾಗಿ ಸಾವಿರಾರು ಆಮಂತ್ರಣ ಪತ್ರಿಕೆಗಳನ್ನು ಹಂಚಿದ್ದರು. ಆದರೆ, ಕೊರೊನಾ ನಿಯಮ ಪಾಲಿಸುವ ಉದ್ದೇಶದಿಂದ ಸರಳ ವಿವಾಹ ನೆರವೇರಿಸಲು ನಿಶ್ವಯಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ