ಕರ್ನಾಟಕ

karnataka

ETV Bharat / state

ಸಿದ್ದು ಸಂಪುಟದಲ್ಲಿ ಮೂವರು ಮುಸ್ಲಿಂ ಸಚಿವರು, ಬಿಜೆಪಿಯಲ್ಲಿ ಒಬ್ಬರೂ ಇಲ್ಲ: ಯೂತ್ ಕಾಂಗ್ರೆಸ್ ಅಧ್ಯಕ್ಷರ ಕಿಡಿ - ಸಿದ್ದು ಸಂಪುಟದಲ್ಲಿ ಮೂವರು ಮುಸ್ಲಿಂ ಸಚಿವರು, ಬಿಜೆಪಿಯಲ್ಲಿ ಒಬ್ಬರೂ ಇಲ್ಲ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಿಡಿ

ಕೆಲವರು ಬಿಜೆಪಿಗೆ ಸೇರ್ಪಡೆಗೊಂಡ ಮಾತ್ರಕ್ಕೆ ಅಲ್ಪಸಂಖ್ಯಾತ ಸಮುದಾಯ ಕೋಮುವಾದಿ ಪಕ್ಷಕ್ಕೆ ಹೋಗುವುದಿಲ್ಲ, ಅಲ್ಪಸಂಖ್ಯಾತರೆಲ್ಲಾ ಕಾಂಗ್ರೆಸ್ ಜತೆಗೆ ಇದ್ದೀವಿ ಎಂದು ಅವರು ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ ಹೊರ ಹಾಕಿದರು.

ಯೂತ್ ಕಾಂಗ್ರೆಸ್ ಅಧ್ಯಕ್ಷ ಕಿಡಿ
ಯೂತ್ ಕಾಂಗ್ರೆಸ್ ಅಧ್ಯಕ್ಷ ಕಿಡಿ

By

Published : Aug 9, 2021, 2:51 PM IST

ಚಾಮರಾಜನಗರ: ಸಿದ್ದರಾಮಯ್ಯ ಸಂಪುಟದಲ್ಲಿ ಮೂವರು ಅಲ್ಪಸಂಖ್ಯಾತ ಸಚಿವರಿದ್ದರು. ಆದರೆ, ಬಿಜೆಪಿ ಸರ್ಕಾರದಲ್ಲಿ ಒಬ್ಬರೂ ಇಲ್ಲ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಆಕ್ರೋಶ ಹೊರಹಾಕಿದರು.

ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ನಿಮಿತ್ತ ರಾಷ್ಟ್ರೀಯ ಹೆದ್ದಾರಿ ಬದಿ ಸಾಲುಗಿಡಗಳನ್ನು ನೆಟ್ಟು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಶಾಸಕ ಮಹೇಶ್ ಅವರ ಕೆಲ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡು ಕಾಂಗ್ರೆಸ್ ಟೀಕಿಸುತ್ತಿದ್ದಾರೆ. ಮುಸ್ಲಿಮರ ವಿರುದ್ಧವಾಗಿದ್ದ ಸಿಎಎ, ಎನ್ಆರ್​​ಸಿ ಕಾನೂನು ತಂದವರು ಬಿಜೆಪಿಯವರು ಕಾಂಗ್ರೆಸ್ ನವರಲ್ಲ, ಶಾದಿ ಭಾಗ್ಯ ತಂದಿದ್ದು, ಅಲ್ಪಸಂಖ್ಯಾತ ಕಲ್ಯಾಣಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದು, ಸಂಪುಟದಲ್ಲಿ ಮೂವರು ಮುಸ್ಲಿಮರಿಗೆ ಸಚಿವ ಸ್ಥಾನ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ, ಈ ಬಿಜೆಪಿ ಸರ್ಕಾರದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಮಂತ್ರಿ ಮಾಡಲಿಲ್ಲ ಎಂದು ಕಿಡಿಕಾರಿದರು.

ಕೆಲವರು ಬಿಜೆಪಿಗೆ ಸೇರ್ಪಡೆಗೊಂಡ ಮಾತ್ರಕ್ಕೆ ಅಲ್ಪಸಂಖ್ಯಾತ ಸಮುದಾಯ ಕೋಮುವಾದಿ ಪಕ್ಷಕ್ಕೆ ಹೋಗುವುದಿಲ್ಲ, ಅಲ್ಪಸಂಖ್ಯಾತರೆಲ್ಲಾ ಕಾಂಗ್ರೆಸ್ ನೊಟ್ಟಿಗೆ ಇದ್ದೀವಿ ಎಂದು ಅವರು ವಿಶ್ವಾಸ ಹೊರಹಾಕಿದರು. ಇದಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ 150 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಸಂಸ್ಥಾಪನಾ ದಿನ ಆಚರಿಸಿದರು.

ABOUT THE AUTHOR

...view details