ಚಾಮರಾಜನಗರ:ಪ್ರೇಯಸಿಯ ಕೊಲೆಗೆ ವಿಫಲ ಯತ್ನ ನಡೆಸಿ ಪ್ರಿಯಕರನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ.
ಪ್ರೇಯಸಿ ಕೊಲೆಗೆ ವಿಫಲ ಯತ್ನ.. ವಿಚಲಿತಗೊಂಡ ಯುವಕ ಆತ್ಮಹತ್ಯೆ.. - Ramapur Police Station
ಹಣದ ವಿಚಾರಕ್ಕೆ ಜಗಳವಾಡಿ ಪ್ರೇಯಸಿಯ ಕೊಲೆಗೆ ಯತ್ನಿಸಿದ ಯುವಕ ಕೊನೆಗೆ ತಾನೆ ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ.
ಕೌದಳ್ಳಿ ಗ್ರಾಮದ ವೆಂಕಟೇಶ ಮೃತ ದುರ್ದೈವಿ. ವೆಂಕಟೇಶ್ ಮಾರ್ಟಳ್ಳಿ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ಎನ್ನಲಾಗಿದ್ದು, ಹಣಕಾಸಿನ ವಿಚಾರವಾಗಿ ಇವರಿಬ್ಬರ ನಡುವೆ ಜಗಳ ನಡೆದಿದೆ ಎಂದು ತಿಳಿದು ಬಂದಿದೆ. ಕಳೆದ ಶುಕ್ರವಾರ ಜಗಳ ತಾರಕ್ಕಕ್ಕೇರಿದ್ದು, ಮಧ್ಯರಾತ್ರಿ ಮನೆ ಛಾವಣಿಯೇರಿ ಬಂದ ವೆಂಕಟೇಶ್, ಮಹಿಳೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಕೆಯ ಬೆರಳುಗಳು ತುಂಡಾಗಿದ್ದು, ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು, ಕೊಲೆಯ ವಿಫಲ ಯತ್ನದ ಬಳಿಕ ವಿಚಲಿತಗೊಂಡ ವೆಂಕಟೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಮಹಿಳೆಯೊಂದಿನ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.ಘಟನೆ ಬಗ್ಗೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.