ಚಾಮರಾಜನಗರ :ಅನ್ಲಾಕ್ 3.0 ಬಳಿಕ ಗಡಿಜಿಲ್ಲೆ ಚಾಮರಾಜನಗರ ಮತ್ತಷ್ಟು ಆರ್ಥಿಕ ಚಟುವಟಿಕೆಗೆ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಅಂತಾರಾಜ್ಯ ಸರಕು ಸಾಗಣೆ ಚಾಲಕರಿಗಿದ್ದ ಕ್ವಾರಂಟೈನ್ ನಿಯಮ ರದ್ದಾಗಿದೆ.
ಚಾಮರಾಜನಗರ ಅನ್ಲಾಕ್ 3.0 ; ಅಂತಾರಾಜ್ಯ ಚಾಲಕರಿಗಿಲ್ಲ ಕ್ವಾರಂಟೈನ್ - Chamarajanagar News
ಶನಿವಾರವಷ್ಟೇ ಭಾನುವಾರದ ಕರ್ಫ್ಯೂ ಮತ್ತು ಸಂಜೆ 4ರ ಬಳಿಕವಿದ್ದ ಲಾಕ್ಡೌನ್ ತೆರವುಗೊಳಿಸಿದ್ದರು. ಇದಾದ ಬಳಿಕ ಈಗ ಕ್ವಾರಂಟೈನ್ ನಿಯಮ ರದ್ದಾಗುವ ಮೂಲಕ ಚಾಮರಾಜನಗರ ಮತ್ತಷ್ಟು ನಿಯಮ ಮುಕ್ತವಾಗಿದೆ..
ಚಾಮರಾಜನಗರ ಅನ್ಲಾಕ್ 3.0: ಅಂತರರಾಜ್ಯ ಚಾಲಕರಿಗಿಲ್ಲ ಕ್ವಾರಂಟೈನ್
ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ಸಂಚರಿಸುವ ಸರಕು ಸಾಗಾಣೆ ವಾಹನ ಚಾಲಕರು 3 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಇರಬೇಕೆಂಬ ನಿಯಮವಿತ್ತು. ಆದರೆ, ಇಂದು ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ನಿಯಮವನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಶನಿವಾರವಷ್ಟೇ ಭಾನುವಾರದ ಕರ್ಫ್ಯೂ ಮತ್ತು ಸಂಜೆ 4ರ ಬಳಿಕವಿದ್ದ ಲಾಕ್ಡೌನ್ ತೆರವುಗೊಳಿಸಿದ್ದರು. ಇದಾದ ಬಳಿಕ ಈಗ ಕ್ವಾರಂಟೈನ್ ನಿಯಮ ರದ್ದಾಗುವ ಮೂಲಕ ಚಾಮರಾಜನಗರ ಮತ್ತಷ್ಟು ನಿಯಮ ಮುಕ್ತವಾಗಿದೆ. ಇದಲ್ಲದೆ ಕೊರೊನಾ ಭೀತಿಯೂ ಸಹ ಕಡಿಮೆಯಾಗಿದೆ.