ಚಾಮರಾಜನಗರ: ಲಾಕ್ ಡೌನ್ ಸಮಯದಲ್ಲಿ ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ, ಊಟಕ್ಕೂ ಕಷ್ಟವಾಗಿದೆ ಎಂದು ಜಿಲ್ಲೆಯ ಹನೂರು ತಾಲೂಕು ಲೊಕ್ಕನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇಬಿನ ಕೊಪ್ಪೆ ಹಾಡಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಹಾಡಿ ನಿವಾಸಿಗಳು ತಾವು ಸಂಕಷ್ಟ ಹಂಚಿಕೊಂಡ ವಿಡಿಯೋ ಒಂದನ್ನು 'ಕನ್ನಡ ಮನಸುಗಳು' ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. 58 ಸೆಕೆಂಡ್ನ ಈ ವಿಡಿಯೋದಲ್ಲಿ ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ, ಭಾರೀ ಕಷ್ಟದಲ್ಲಿದ್ದೇವೆ. ಊಟಕ್ಕೂ ಪರದಾಡುವಂತಾಗಿದೆ. ಶಾಸಕರು, ಸಂಸದರು ಯಾರೂ ನಮ್ಮ ಕಡೆ ತಿರುಗಿ ನೋಡಿಲ್ಲ ಎಂದು ಹೇಳುವುದನ್ನು ಕಾಣಬಹುದು. ಈ ಟ್ವೀಟ್ ಅನ್ನು ಸಿಎಂ ಬಿಎಸ್ವೈ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಗೆ ಟ್ಯಾಗ್ ಮಾಡಲಾಗಿದೆ.