ಕರ್ನಾಟಕ

karnataka

ಚಾಮರಾಜನಗರದ ಜಮೀನಿನಲ್ಲಿ ಕ್ವಿಂಟಾಲ್ ತೂಕದ ಹೆಬ್ಬಾವು ಸೆರೆ- ಟ್ರ್ಯಾಕ್ಟರ್​ನಲ್ಲಿ ಕಾಡಿಗೆ ರವಾನೆ

By

Published : Jul 2, 2022, 3:53 PM IST

14 ಅಡಿ ಉದ್ದದ ಇಂದು ಕ್ವಿಂಟಲ್​ ತೂಕದ ಹೆಬ್ಬಾವು ಚಾಮರಾಜನಗರದಲ್ಲಿ ಕಾಣಿಸಿಕೊಂಡಿದೆ. ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿಗೆ ಬಿಡಲಾಗಿದೆ.

python caught on the farm and sent to the forest
python

ಚಾಮರಾಜನಗರ: ತಾಲೂಕಿನಜ್ಯೋತಿಗೌಡನಪುರ ಬೆಲವತ್ತ ಜಮೀನಿನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಕೆಲಸಗಾರರು ಹೋದಾಗ ಈ ದೈತ್ಯ ಗಾತ್ರದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಜಮೀನಿನ ಮಾಲೀಕರು ಸ್ನೇಕ್ ಚಾಂಪ್ ಅವರಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ.

ಜಮೀನಿನಲ್ಲಿ ಕ್ವಿಂಟಾಲ್ ತೂಕದ ಹೆಬ್ಬಾವು ಸೆರೆ- ಕಾಡಿಗೆ ರವಾನೆ

ಸ್ಥಳಕ್ಕೆ ತೆರಳಿದ ಸ್ನೇಕ್ ಚಾಂಪ್ ಸತತ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದಿದ್ದಾರೆ. 100 ಕೆಜಿಗೂ ಹೆಚ್ಚು ತೂಗುವ ಈ ಹಾವು ಬರೋಬ್ಬರಿ 14 ಅಡಿ ಉದ್ದವಿದೆ. ಹಾವನ್ನು ಆಟೋ ಮತ್ತು ಕಾರಿನಲ್ಲಿ ಸಾಗಿಸಲಾಗದೇ ಟ್ರಾಕ್ಟರ್ ಬಳಸಿ ಸಾಗಿಸಲಾಯಿತು. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿಗೆ ಹೆಬ್ಬಾವನ್ನು ಬಿಡಲಾಗಿದೆ.

ಇದನ್ನೂ ಓದಿ:ವಿಡಿಯೋ - ಹರಿದ್ವಾರದ ಪತ್ರಕರ್ತನ ಮನೆಯಲ್ಲಿ ದೈತ್ಯ ಹೆಬ್ಬಾವು!

ABOUT THE AUTHOR

...view details