ಕರ್ನಾಟಕ

karnataka

ಚಾಮರಾಜನಗರದಲ್ಲಿ ಅದ್ಧೂರಿಯಾಗಿ ಜರುಗಿತು ಪೊಲೀಸ್ ಗಣಪನ ನಿಮಜ್ಜನ

ಗಣಪತಿ ಮೆರವಣಿಗೆಯಲ್ಲಿ ಪೊಲೀಸರೇ ಹೆಚ್ಚಾಗಿ ಕಾಣುವುದರಿಂದ ವಿದ್ಯಾ ಗಣಪತಿಯನ್ನು ಪೊಲೀಸ್ ಗಣಪತಿ ಎಂದು ಕರೆಯಲಾಗುತ್ತೆ. ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸುವುದರಿಂದ ಆರ್​​​ಎಸ್ಎಸ್ ಗಣಪತಿ ಅಂತಲೂ ಜನರು ಕರೆಯುತ್ತಾರೆ.

By

Published : Oct 1, 2019, 10:55 AM IST

Published : Oct 1, 2019, 10:55 AM IST

ಪೊಲೀಸ್ ಗಣಪತಿ ನಿಮಜ್ಜನ

ಚಾಮರಾಜನಗರ: ನಗರದ ಪೊಲೀಸ್​ ಗಣಪತಿಯ ಶೋಭಾಯಾತ್ರೆಯನ್ನು ಬಹಳ ಅದ್ಧೂರಿಯಾಗಿ ನಡೆಸಲಾಯಿತು.

ಸೋಮವಾರ ಬೆಳಗ್ಗೆ 10:45 ಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಗಣಪತಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದ ಬಳಿಕ, ಜಾನಪದ ಕಲಾತಂಡಗಳೊಂದಿಗೆ ನಗರದ್ಯಾಂತ ಮೆರವಣಿಗೆ ಮಾಡಲಾಯಿತು. ಬರೋಬ್ಬರಿ 16 ತಾಸು ನಡೆದ ಉತ್ಸವದ ಬಳಿಕ ದೊಡ್ಟರಸಿನ ಕೊಳದಲ್ಲಿ ಕ್ರೇನ್ ಸಹಾಯದಿಂದ ಮೂರ್ತಿಯನ್ನು ನಿಮಜ್ಜನಗೊಳಿಸಲಾಯಿತು.

ಸಂಭ್ರಮದಿಂದ ಜರುಗಿದ ಪೊಲೀಸ್ ಗಣಪನ ನಿಮಜ್ಜನ

ಗುಂಡ್ಲುಪೇಟೆ ಸರ್ಕಲ್ ನ ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ಹಾದು ಹೋಗುವಾಗ ಶಾಂತಿ-ಸುವ್ಯವಸ್ಥೆಯ ದೃಷ್ಟಿಯಿಂದ ಡಿಸಿ ಬಿ.ಬಿ. ಕಾವೇರಿ, ಎಸ್ ಪಿ ಹೆಚ್.ಡಿ‌. ಆನಂದಕುಮಾರ್, ಎಸಿ ನಿಖಿತಾ ಚಿನ್ನಸ್ವಾಮಿ ಸ್ಥಳದಲ್ಲಿ ಹಾಜರಿದ್ದರು.

ಗಣಪತಿ ಮೆರವಣಿಗೆಯಲ್ಲಿ ಪೊಲೀಸರೇ ಹೆಚ್ಚಾಗಿ ಕಂಡುಬರುವುದರಿಂದ ಈ ವಿದ್ಯಾ ಗಣಪತಿಯನ್ನು ಪೊಲೀಸ್ ಗಣಪತಿ, ಹಿಂದೂ ಪರ ಸಂಘಟನೆಗಳು ಪ್ರತಿಷ್ಟಾಪಿಸುವುದರಿಂದ ಆರ್​​​ಎಸ್ಎಸ್ ಗಣಪತಿ ಎಂದು ಕರೆಯಲಾಗುತ್ತದೆ.

ABOUT THE AUTHOR

...view details