ಚಾಮರಾಜನಗರ: ಲಾಕ್ಡೌನ್ 4.0ನಲ್ಲಿ ರಾಜ್ಯ ಸರ್ಕಾರ ಸೂಚಿಸಿರುವ ಭಾನುವಾರ ಸಂಪೂರ್ಣ ಲಾಕ್ಡೌನ್ಗೆ ವರ್ತಕರೇನೋ ಎಲ್ಲಾ ಅಂಗಡಿಗಳನ್ನು ಮುಚ್ಚಿದ್ದಾರೆ. ಆದರೆ, ಜನರು ಮಾತ್ರ ತಮ್ಮ ಎಂದಿನ ಓಡಾಟ ಮುಂದುವರೆಸಿರುವುದು ಕಂಡುಬಂದಿತು.
ಮುಚ್ಚಿದ ಬಜಾರು, ಓಡಾತ್ತಿರುವ ಜನರು... ಇದು ಗಡಿಜಿಲ್ಲೆಯ ಲಾಕ್ಡೌನ್ ಪರಿ!
ಹೋಟೆಲ್ಗಳಲ್ಲಿ ಪಾರ್ಸೆಲ್ ಸೇವೆ, ಹಾಲು ಹಾಗೂ ಇನ್ನಿತರ ದಿನ್ಯನಿತ್ಯ ವಸ್ತುಗಳ ಅಂಗಡಿ ಮತ್ತು ಮೆಡಿಕಲ್ ಶಾಪ್ ಮಾತ್ರ ತೆರೆದಿತ್ತು. ಜೊತೆಗೆ, ಕೆಲ ಮಾಂಸದಂಗಡಿಗಳು ವ್ಯಾಪಾರ ನಡೆಸುತ್ತಿವೆ.
ಅಂಗಡಿ ಬೀದಿ, ಪಿಡಬ್ಲೂಡಿ ಕಾಲನಿ ಬಿಟ್ಟರೆ ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ರಥದ ಬೀದಿಯಲ್ಲಿ ಜನರು ಓಡಾಟ, ಗುಂಪು ಸೇರಿ ಅಲ್ಲಲ್ಲಿ ಮಾತನಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.
ಇನ್ನು, ಹೋಟೆಲ್ಗಳಲ್ಲಿ ಪಾರ್ಸೆಲ್ ಸೇವೆ, ಹಾಲು ಹಾಗೂ ಇನ್ನಿತರ ದಿನ್ಯನಿತ್ಯ ವಸ್ತುಗಳ ಅಂಗಡಿ ಮತ್ತು ಮೆಡಿಕಲ್ ಶಾಪ್ ಮಾತ್ರ ತೆರೆದಿತ್ತು. ಜೊತೆಗೆ, ಕೆಲ ಮಾಂಸದಂಗಡಿಗಳು ವ್ಯಾಪಾರ- ವ್ಯವಹಾರ ಮಾಡಿದರು. ಸಿಎಂ ಬಿಎಸ್ವೈ ಹೇರಿರುವ ಸಂಪೂರ್ಣ ಲಾಕ್ಡೌನ್ ಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಗೆ ಜನರು ಉತ್ತಮವಾಗಿ ಸ್ಪಂದಿಸಿದ್ದರು.