ಚಾಮರಾಜನಗರ :ಆಕ್ಸಿಜನ್ ದುರಂತದ ಬಗ್ಗೆ ಸರ್ಕಾರದ ನಡೆ ವಿರುದ್ಧ ಕಿಡಿಕಾರಿ, ಕರುಣಾಜಜನಕ ಕಥೆಯೊಂದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ತೆರೆದಿಟ್ಟಿದ್ದಾರೆ. ಕಳೆದ ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ತನ್ನ ತಾಯಿಯನ್ನು ಕಳೆದುಕೊಂಡ ಯುವಕನೋರ್ವ ಅಂದು ನಡೆದ ಘಟನೆ ಚಿತ್ರಣವನ್ನು ಹೇಳಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತ : ವಿಡಿಯೋ ಮೂಲಕ ಕರುಣಾಜನಕ ಕಥೆ ತೆರೆದಿಟ್ಟ ಡಿಕೆಶಿ - Chamarajanagar
ಈ ಸಾವುಗಳಿಗೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿರುವ ಅವರು, ಸಂತ್ರಸ್ತ ಕುಟುಂಬಗಳ ಅಸಹಾಯಕರ ದನಿಯಾಗಿ ನಾವಿದ್ದೇವೆ. ಪರಿಹಾರ ಕೊಡುವ ತನಕ ಸರ್ಕಾರವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಡಿಕೆಶಿ ಬರೆದುಕೊಂಡಿದ್ದಾರೆ..
ಡಿ.ಕೆ.ಶಿವಕುಮಾರ್
"ಒಂದೇ ರೂಂನಲ್ಲಿ 12-15 ಮೃತದೇಹಗಳನ್ನು ಮಲಗಿಸಿದ್ದರು. ಅದರ ನಡುವೆ ತನ್ನ ತಾಯಿಯ ಶವವೂ ಇತ್ತು. ಯಾರದ್ದೋ ನಿರ್ಲಕ್ಷ್ಯಕ್ಕೆ ತನ್ನ ಸಾಯಿ ಸತ್ತರು" ಎಂದು ಹೇಳುವ ಮೂರುವರೆ ನಿಮಿಷದ ವಿಡಿಯೋವನ್ನು ಚಾಮರಾಜನಗರ ಇನ್ಸೈಡ್ ಸ್ಟೋರಿಸ್ (#ChamarajanagaraInsideStories) ಎಂಬ ಹ್ಯಾಷ್ ಟ್ಯಾಗ್ ಕೊಟ್ಟು ಡಿ ಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ.
ಈ ಸಾವುಗಳಿಗೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿರುವ ಅವರು, ಸಂತ್ರಸ್ತ ಕುಟುಂಬಗಳ ಅಸಹಾಯಕರ ದನಿಯಾಗಿ ನಾವಿದ್ದೇವೆ. ಪರಿಹಾರ ಕೊಡುವ ತನಕ ಸರ್ಕಾರವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಡಿಕೆಶಿ ಬರೆದುಕೊಂಡಿದ್ದಾರೆ.