ಚಾಮರಾಜನಗರ: ಕಳೆದ 9 ದಿನದಲ್ಲಿ 42 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಡೆಯರಪಾಳ್ಯ ಟಿಬೆಟಿಯನ್ ಕ್ಯಾಂಪ್ ಅನ್ನು ಸೀಲ್ಡೌನ್ ಮಾಡಲಾಗಿದೆ.
ವ್ಯಾಕ್ಸಿನ್ ಪಡೆದರೂ ಅಪ್ಪಳಿಸುವ ಕೋವಿಡ್

3 ಸಾವಿರಕ್ಕೂ ಹೆಚ್ಚು ಟಿಬೆಟಿಯನ್ ನಿರಾಶ್ರಿತರು ಈ ಕ್ಯಾಂಪಿನಲ್ಲಿದ್ದಾರೆ. ದಿನವೊಂದಕ್ಕೆ 7 ರಿಂದ 8 ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರ ನಿದ್ದೆಗೆಡಿಸಿದೆ. ವ್ಯಾಕ್ಸಿನ್ ಪಡೆದಿದ್ದರೂ ಕೂಡ ವೈರಸ್ ತಗುಲುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಸೀಲ್ಡೌನ್ ಮಾಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮ ಪಾಲನೆ ಮಾಡುವಂತೆ ಸೂಚಿಸಿದ್ದಾರೆ.
ಎರಡನೇ ಕೋವಿಡ್ ಅಲೆಯ ವೇಳೆ ಜಿಲ್ಲೆಯಲ್ಲೇ ಮೊದಲು ಟಿಬೆಟಿಯನ್ ಕ್ಯಾಂಪ್ ಸೋಂಕು ಮುಕ್ತವಾಗಿತ್ತು. ಲಸಿಕೆ ಅಭಿಯಾನದಲ್ಲೂ ಸಹ ಗಮನ ಸೆಳೆದಿತ್ತು. ಇದೀಗ ಟಿಬೆಟಿಯನ್ನರಿಗೆ ಸೋಂಕು ಹೇಗೆ ತಗುಲಿತು ಎಂದು ಪತ್ತೆ ಹಚ್ಚಬೇಕಿದೆ.