ಚಾಮರಾಜನಗರ:ಪೊಲೀಸ್ ಗಣಪನೆಂದೇ ಕರೆಯುವ ದೊಡ್ಡ ಗಣಪತಿಯ ನಿಮಜ್ಜನ ಮೆರವಣಿಗೆ ಆರಂಭವಾಗಿದ್ದು ಎಸ್ ಪಿ ಹೆಚ್.ಡಿ.ಆನಂದಕುಮಾರ್ ಗಣೇಶನಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.
ಕಂಸಾಳೆ, ಚಂಡೆ ಮದ್ದಳೆಯು ಮೆರವಣಿಗೆಗೆ ಮೆರುಗು ನೀಡಿತು. ಮೆರವಣಿಗೆಯುದ್ದಕ್ಕೂ ಭಾರೀ ಪೊಲೀಸ್ ಭದ್ರತೆ ಕೈಗೊಂಡಿದ್ದು 3 ಮಂದಿ ಡಿವೈಎಸ್ಪಿ, 7 ಮಂದಿ ಸಿಪಿಐ, 19 ಮಂದಿ ಪಿಎಸ್ಐ, 50ಮಂದಿ ಎಎಸ್ಐ, 400 ಮಂದಿ ಪೊಲೀಸ್ ಪೇದೆಗಳು, 5 ಕೆಎಸ್ಆರ್ಪಿ ತುಕಡಿ, 7 ಡಿಆರ್ ಹಾಗೂ 300 ಮಂದಿ ಗೃಹರಕ್ಷಕದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.