ಕರ್ನಾಟಕ

karnataka

ETV Bharat / state

ಚಾಮರಾಜನಗರ: ಕಾಡಾನೆ ದಾಳಿ, ರೈತನ ಸ್ಥಿತಿ ಗಂಭೀರ - wild elephant attack in chamarajanagara

ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಕಾಡಾನೆ ದಾಳಿ- ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಘಟನೆ- ಅದೇ ಗ್ರಾಮದಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗ.

chamarajanagar-farmers-condition-critical-due-to-elephant-attack
ಚಾಮರಾಜನಗರ: ಕಾಡಾನೆ ದಾಳಿಗೆ ರೈತನ ಸ್ಥಿತಿ ಗಂಭೀರ

By

Published : Jan 2, 2023, 4:48 PM IST

Updated : Jan 2, 2023, 5:11 PM IST

ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ಬೆಟ್ಟದಮಾದಹಳ್ಳಿ ಗ್ರಾಮದ ರೈತ ದೇವರಾಜ್​ ಎಂಬುವರ ಮೇಲೆ ಕಾಡಾನೆ ದಾಳಿ ಮಾಡಿದೆ. ರೈತ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ. ಪರಿಣಾಮ​ ದೇವರಾಜ್​ ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾಳಿ ಮಾಡಿದ ಬಳಿಕವು ಸುಮ್ಮನಿರದ ಆನೆ ಬೈಕ್ ಮೇಲೆ ಮುಗಿಬಿದ್ದು ಬೈಕ್​ಅನ್ನು ಸಂಪೂರ್ಣ ಜಖಂ ಮಾಡಿದೆ. ಸದ್ಯ, ಬೆಟ್ಟದಮಾದಹಳ್ಳಿ ಗ್ರಾಮದ ಗುರು ಎಂಬವರ ಬಾಳೆತೋಟದಲ್ಲಿ ಸಲಗ ಬೀಟು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಸತತವಾಗಿ ಕಾಡಾನೆ ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಆನೆಗಳು ಜಮೀನಿನತ್ತ ನುಗ್ಗಿ ಬರುತ್ತಿವೆ ಎಂದು ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಉಪ್ಪಿನಂಗಡಿಯಲ್ಲಿ ಕಾಡಾನೆ ದಾಳಿ: ತಂದೆ ಸಾವು, ಮಗ ಗಂಭೀರ

Last Updated : Jan 2, 2023, 5:11 PM IST

ABOUT THE AUTHOR

...view details