ಕರ್ನಾಟಕ

karnataka

ETV Bharat / state

ಚಾಮರಾಜನಗರ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ - 5 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕಬ್ಬು ಹಾಕಿದ್ದ ರೈತ

ನಾಗೇಂದ್ರ (44) ಮೃತ ದುರ್ದೈವಿ. 5 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕಬ್ಬು ಹಾಕಿದ್ದ ರೈತ ಬೆಳೆ ಕೈಗೆ ಬಾರದೇ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.

Chamarajanagar farmer commits suicide by consuming poison
ಚಾಮರಾಜನಗರ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ

By

Published : Sep 10, 2020, 11:56 AM IST

ಚಾಮರಾಜನಗರ: ಸಾಲಬಾಧೆ ತಾಳಲಾರದೇ ರೈತನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆಲೂರಿನಲ್ಲಿ ನಡೆದಿದೆ.

ಗ್ರಾಮದ ನಾಗೇಂದ್ರ (44) ಮೃತ ದುರ್ದೈವಿ. 5 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕಬ್ಬು ಹಾಕಿದ್ದ ರೈತ ಬೆಳೆ ಕೈಗೆ ಬಾರದೇ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಬ್ಯಾಂಕ್ ಹಾಗೂ ಕೈ ಸಾಲ ಹೆಚ್ಚಾಗಿದ್ದರಿಂದ ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಶವವಿದ್ದು, ಮೃತ ಸಂಬಂಧಿಕರ ದೂರಿನ ಮೇಲೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.

For All Latest Updates

ABOUT THE AUTHOR

...view details