ಚಾಮರಾಜನಗರ:ಇದೇ ತಿಂಗಳು 15 ಮತ್ತು 16 ರಂದು ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ 11ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಕೋಡಿಉಗನೆ ಮಂಜು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಹಿರಿಯ ಸಾಹಿತಿಗಳಾದ ಕೆ. ವೆಂಕಟರಾಜು, ಡಾ. ಪ್ರೇಮಶೇಖರ, ಡಾ. ವೆಂಕಟೇಶ ಇಂದ್ವಾಡಿ, ಪುಟ್ಟ ತಾಯಮ್ಮ ಮುಂತಾದವರ ಹೆಸರು ಚರ್ಚೆಗೆ ಬಂದಿದ್ದವು. ನಂತರ ಕೋಡಿಉಗನೆ ಅವರ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಭಾನುವಾರ ಅವರ ನಿವಾಸಕ್ಕೆ ತೆರಳಿದ ಚಾಮರಾಜನಗರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್, ಅಧಿಕೃತವಾಗಿ ಮಂಜು ಕೋಡಿಉಗನೆ ಅವರಿಗೆ ವಿಷಯ ತಿಳಿಸಿ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ.