ಕರ್ನಾಟಕ

karnataka

ETV Bharat / state

ತಮಿಳುನಾಡಿನಿಂದ ಚಾಮರಾಜನಗರ ಪ್ರವೇಶಿಸುವವರಿಗೆ ಬೇಕಿಲ್ಲ ನೆಗೆಟಿವ್ ರಿಪೋರ್ಟ್.. ಆದೇಶ ವಾಪಸ್​ ಪಡೆದ ಡಿಸಿ

ಕಳೆದ 20 ದಿನದಿಂದ ಜಿಲ್ಲೆಯಲ್ಲಿ ಒಂದಂಕಿ‌ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ‌. ಆದರೆ, ಕೇರಳದಿಂದ ಬರುವವರಿಗೆ ಮಾತ್ರ ಆರ್‌ಟಿ-ಪಿಸಿಆರ್​​ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮುಂದುವರೆಸಲಾಗಿದೆ‌..

District Collector Dr. M.R.Ravi
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

By

Published : Sep 18, 2021, 8:17 PM IST

ಚಾಮರಾಜನಗರ :ತಮಿಳುನಾಡಿನಿಂದ ರಾಜ್ಯ ಪ್ರವೇಶಿಸುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತೋರಿಸಬೇಕೆಂಬುದಕ್ಕೆ ವಿನಾಯಿತಿ ಸಿಕ್ಕಿದೆ. ರಿಪೋರ್ಟ್ ಇಲ್ಲದೆಯೂ ಜಿಲ್ಲೆಯಲ್ಲಿ ಸಂಚರಿಸಬಹುದಾಗಿದೆ.

ಈ ಮೊದಲು ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದ್ದ ಆದೇಶವನ್ನುಜಿಲ್ಲಾಧಿಕಾರಿ ಡಾ. ಎಂ ಆರ್ ರವಿ ಅವರು ವಾಪಸ್ ಪಡೆದಿದ್ದಾರೆ. ತಮಿಳುನಾಡು ಮತ್ತು ರಾಜ್ಯದ ಗಡಿಗಳಾದ ಪುಣಜನೂರು, ಅರ್ಧನಾರೀಪುರ, ನಾಲ್‌ರೋಡ್, ಪಾಲರ್, ಕೆಕ್ಕನಹಳ್ಳ ಚೆಕ್ ಪೋಸ್ಟ್​ನಲ್ಲಿ ರಿಪೋರ್ಟ್ ಇಲ್ಲದೆ ಸಂಚಾರಕ್ಕೆ ಅವಕಾಶ ಕೊಡಲಾಗಿದೆ.

ಡಿಸಿ ಆದೇಶದ ಪ್ರತಿ

ಕಳೆದ 20 ದಿನದಿಂದ ಜಿಲ್ಲೆಯಲ್ಲಿ ಒಂದಂಕಿ‌ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ‌. ಆದರೆ, ಕೇರಳದಿಂದ ಬರುವವರಿಗೆ ಮಾತ್ರ ಆರ್‌ಟಿ-ಪಿಸಿಆರ್​​ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮುಂದುವರೆಸಲಾಗಿದೆ‌.

ಕಳೆದೊಂದು ತಿಂಗಳಿಂದ ತಮಿಳುನಾಡಿನಿಂದ ಬರುವ ಪ್ರಯಾಣಿಕರಿಗೆ ನೆಗೆಟಿವ್ ವರದಿಯನ್ನು ಕಡ್ಡಾಯಗಿಳಿಸಿ ಜಿಲ್ಲಾಡಳಿತ ಆದೇಶ ನೀಡಿತ್ತು. ಅದರಂತೆ ಬಸ್ ಹಾಗೂ ವೈಯಕ್ತಿಕ ವಾಹನ ಸಂಚಾರದ ವೇಳೆ ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಬೇಕಿತ್ತು.

ಓದಿ: ಚಿಕ್ಕೋಡಿ : ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು

ABOUT THE AUTHOR

...view details