ಕರ್ನಾಟಕ

karnataka

ETV Bharat / state

ಬೆಳೆ ಹಾನಿ ಕುರಿತ ಜಂಟಿ ಸಮೀಕ್ಷೆಗೆ ಚಾಮರಾಜನಗರ ಡಿಸಿ ಆದೇಶ: ತುರ್ತು ಸ್ಪಂದನೆಗೆ ಸೂಚನೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಇದರ ಸಂಬಂಧ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ಕ್ರಮವಹಿಸಬೇಕು ಎಂದು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್(DC Charulatha Somal) ಸೂಚನೆ ನೀಡಿದ್ದಾರೆ.

DC Charulatha Somal
ಜಿಲ್ಲಾಧಿಕಾರಿ ಚಾರುಲತಾ ಸೋಮಲ್

By

Published : Nov 20, 2021, 9:44 AM IST

ಚಾಮರಾಜನಗರ:ಅತಿವೃಷ್ಟಿಯಿಂದಾಗಿ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಪರಿಹಾರ ವಿತರಣೆ ಹಾಗೂ ಹಾನಿಯ ಅಂದಾಜು ನಿರ್ಧರಿಸಿ ವರದಿ ಸಲ್ಲಿಸಿ ಇನ್‍ಪುಟ್ ಸಬ್ಸಿಡಿ ಅನುದಾನ ಬಿಡುಗಡೆ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್(DC Charulatha Somal) ಅವರು ಜಂಟಿ ಸಮೀಕ್ಷಾ ತಂಡ ರಚಿಸಿ ಆದೇಶಿಸಿದ್ದಾರೆ.

ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ, ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಮಲ್ಲು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಗಿರೀಶ್ ಈ ತಂಡದಲ್ಲಿದ್ದಾರೆ.

ನೇಮಕಗೊಂಡಿರುವ ತಂಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಭಾರಿ ಮಳೆಯಿಂದಾಗಿರುವ ಬೆಳೆ ನಷ್ಟ, ವಿವರ ಪರಿಹಾರ ವಿತರಣೆಯ ಅಂದಾಜು ಮೊತ್ತ, ಇನ್ನಿತರ ಅಗತ್ಯ ವರದಿಯೊಂದಿಗೆ 7 ದಿನದೊಳಗೆ ಸಮೀಕ್ಷಾ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ತುರ್ತು ಸ್ಪಂದನೆಗೆ ಸೂಚನೆ:

ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಇದರ ಸಂಬಂಧ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ಕ್ರಮವಹಿಸಬೇಕು ಎಂದು ಡಿಸಿ ಸೂಚನೆ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಗೂಗಲ್ ಮೀಟ್ ಮೂಲಕ ಅವರು ಮಾತನಾಡಿ,

  • ಹೆಚ್ಚು ಮಳೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ತೊಂದರೆ ಎದುರಾದರೂ ತಕ್ಷಣವೇ ಅಗತ್ಯ ಕ್ರಮಗಳಿಗೆ ಮುಂದಾಗಬೇಕು.
  • ಸಾಮಾನ್ಯವಾಗಿ ಯಾವ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತದೆ ಎಂಬ ಬಗ್ಗೆ ಪೂರ್ವ ಮಾಹಿತಿ ಹೊಂದಿರಬೇಕು.
  • ಯಾವುದೇ ತುರ್ತು ಸಮಸ್ಯೆಗಳು ಎದುರಾದರು ಕೂಡಲೇ ಧಾವಿಸಬೇಕು.
  • ಹಾನಿ ಸಂಭವಿಸಿದ ಪ್ರದೇಶಕ್ಕೆ ಕೂಡಲೇ ಭೇಟಿ ನೀಡಬೇಕು. ದಾಖಲೆಗಳ ಸಮೇತ ಪರಿಹಾರ ಕ್ರಮಗಳಿಗೆ ಸ್ಪಂದಿಸಬೇಕು. ಜನರ ಸಂಕಷ್ಟಗಳಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ಅತಿವೃಷ್ಟಿ, ಪ್ರವಾಹ ಇನ್ನಿತರ ಪ್ರಕೃತಿ ವಿಕೋಪಗಳಿಂದ ಸಂಭವಿಸಬಹುದಾದ ಹಾನಿಯನ್ನು ಸಮರ್ಪಕವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಸುತ್ತೋಲೆಯನ್ನೂ ಹೊರಡಿಸಿದ್ದಾರೆ.

ಇದನ್ನೂ ಓದಿ:ಬಾಕಿ ಬಿಲ್‌ ಪಾವತಿಗೆ 30-40ರಷ್ಟು ಕಮಿಷನ್‌ ಪರಿಸ್ಥಿತಿ; ರಾಜ್ಯಪಾಲರಿಗೆ ಗುತ್ತಿಗೆದಾರರಿಂದ ಪತ್ರ

ABOUT THE AUTHOR

...view details