ಚಾಮರಾಜನಗರ: ಸದಾ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವ ಚಾಮರಾಜನಗರ ನಗರಸಭೆ ಸಿಬ್ಬಂದಿ ಕಾರ್ಯವೈಖರಿಯ ಮತ್ತೊಂದರ ಕರ್ಮಕಾಂಡ ಬಯಲಾಗಿದ್ದು, ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತೆರಿಗೆ ರಿಜಿಸ್ಟ್ರಾರ್ ತಿದ್ದುಪಡಿ: ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚನೆ - ಇಬ್ಬರು ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಡಿಸಿ ಸೂಚನೆ
ಇಬ್ಬರು ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪೌರಾಯುಕ್ತ ಹಾಗೂ ಎಸ್ಪಿಗೆ ಸೂಚಿಸಿದ್ದಾರೆ.
ಚಾಮರಾಜನಗರ
ಚಾಮರಾಜನಗರ ನಗರಸಭೆಯಲ್ಲಿ ವಿಷಯ ನಿರ್ವಾಹಕರಾಗಿದ್ದ ಪ್ರಸ್ತುತ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಎಸ್ಡಿಎ ಆಗಿರುವ ಸಿ.ಎಂ.ಗುಣಶ್ರೀ ಹಾಗೂ ಕಚೇರಿ ವ್ಯವಸ್ಥಾಪಕಿ ಮರ್ಸಿರೀಟಾ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪೌರಾಯುಕ್ತ ಹಾಗೂ ಎಸ್ಪಿಗೆ ಸೂಚಿಸಿದ್ದಾರೆ.
ಏನಿದು ಪ್ರಕರಣ: ಗುಣಶ್ರೀ ಮತ್ತು ಮರ್ಸಿರೀಟಾ ಅವರು ನಗರಸಭೆ ವ್ಯಾಪ್ತಿಗೆ ಒಳಪಡುವ ಒಟ್ಟು 14 ಆಸ್ತಿ ತೆರಿಗೆ ಕಡತಗಳನ್ನು ವೈಟ್ನರ್ ಬಳಸಿ ತಿದ್ದುಪಡಿ ಮಾಡಿ ಬೇರೆಯವರ ಹೆಸರಿಗೆ ವಿಭಾಗಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಡಿಸಿ ಇಬ್ಬರಿಗೂ ಬಿಸಿ ಮುಟ್ಟಿಸಿದ್ದಾರೆ.