ಚಾಮರಾಜನಗರ :ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಎಳೆಪಿಳ್ಳಾರಿ ದೇವಾಲಯದ ಬಳಿ ಸಂಭವಿಸಿದೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಮನು(24) ಹಾಗೂ ಚಾಮರಾಜನಗರ ಗಾಳಿಪುರ ನಿವಾಸಿ ರಾಜು(24) ಎಂಬುವರು ಮೃತರು. ಶಾಂತರಾಜು ಎಂಬುವರು ಗಾಯಗೊಂಡು ಚಾಮರಾಜನಗರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜು ಕೊಳ್ಳೇಗಾಲದಿಂದ ಚಾಮರಾಜನಗರ ಕಡೆಗೆ ಹಾಗೂ ಮನು ಮತ್ತು ಶಾಂತರಾಜು ಕೊಳ್ಳೇಗಾಲ ಕಡೆಗೆ ತೆರಳುವಾಗ ಎಳೆಪಿಳ್ಳಾರಿ ದೇವಾಲಯದ ಬಳಿ ಅಪಘಾತ ಸಂಭವಿಸಿದೆ. ರಾಜು ಅತಿವೇಗವಾಗಿ ಬರುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಈ ಸಂಬಂಧ ಮಾಂಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ತರುವಂತೆ ಪತಿ ಕಿರುಕುಳಕ್ಕೆಪತ್ನಿ ಆತ್ಮಹತ್ಯೆ :ತವರು ಮನೆಯಿಂದ ಹಣ ತರುವಂತೆ ಪತಿ ನೀಡುತ್ತಿದ್ದ ಕಿರುಕುಳ ತಾಳಲಾರದೇ ಬೇಸತ್ತ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.