ಚಾಮರಾಜನಗರ :ಜಿಲ್ಲೆಯಲ್ಲಿಂದು 85 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2491ಕ್ಕೆ ಏರಿಕೆಯಾಗಿದೆ. ಹೋಂ ಐಸೋಲೇಷನ್ನಲ್ಲಿದ್ದ 37 ಮಂದಿ ಸೇರಿದಂತೆ 55 ಮಂದಿ ಗುಣಮುಖರಾಗಿದ್ದಾರೆ.
ಚಾಮರಾಜನಗರದಲ್ಲಿಂದು 85 ಸೋಂಕಿತರು ಪತ್ತೆ, 55 ಮಂದಿ ಗುಣಮುಖ - Corona Update
ಚಾಮರಾಜನಗರ ಜಿಲ್ಲೆಯಲ್ಲಿಂದು ಹೋಂ ಐಸೋಲೇಷನ್ನಲ್ಲಿದ್ದ 37 ಮಂದಿ ಸೇರಿದಂತೆ 55 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
![ಚಾಮರಾಜನಗರದಲ್ಲಿಂದು 85 ಸೋಂಕಿತರು ಪತ್ತೆ, 55 ಮಂದಿ ಗುಣಮುಖ Chamarajanagar Corona Update](https://etvbharatimages.akamaized.net/etvbharat/prod-images/768-512-8656474-276-8656474-1599060430516.jpg)
ಚಾಮರಾಜನಗರ ಜಿಲ್ಲೆ
ಸಕ್ರಿಯ ಪ್ರಕರಣಗಳು 535 ಆಗಿದ್ದು ಈವರೆಗೆ 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 161 ಮಂದಿ ಹೋಂ ಐಸೋಲೇಷನ್ನಲ್ಲಿದ್ದು 15 ಮಂದಿ ಐಸಿಯುನಲ್ಲಿ ದಾಖಲಾಗಿದ್ದಾರೆ. 824 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. 82ರ ವೃದ್ಧ ಸೇರಿದಂತೆ 65, 75 70 ವರ್ಷ ಹಾಗೂ 16, 10, 8 ವರ್ಷದ ಮಕ್ಕಳು ಗುಣಮುಖರಾಗಿದ್ದಾರೆ.