ಚಾಮರಾಜನಗರ:ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿರುವಸಾವುಗಳಿಗೆ ಸರ್ಕಾರವೇ ಹೊಣೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಆರೋಪಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯರಾತ್ರಿಯಿಂದಲೂ ಸರ್ವ ಪ್ರಯತ್ನ ಪಟ್ಟು ಆಕ್ಸಿಜನ್ ತರಿಸಿದ್ದೇವೆ. ಸರ್ಕಾರ ನೇರವಾಗಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸಬೇಕು. ಮೈಸೂರಿನಿಂದ ಏಕೆ ಪೂರೈಸುತ್ತಿದೆ?. ಅಲ್ಲಿನ ಡಿಸಿ ಜಿಲ್ಲೆಗೆ ಹೆಚ್ಚು ಒತ್ತು ಕೊಟ್ಟಾಗ ನಮಗೆಲ್ಲಿ ಆಕ್ಸಿಜನ್ ಸಿಗುತ್ತದೆ. ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದರು.