ಕರ್ನಾಟಕ

karnataka

ETV Bharat / state

ಚಾಮರಾಜನಗರ: 6 ಪದವಿ ವಿದ್ಯಾರ್ಥಿಗಳು ಸೇರಿದಂತೆ 20 ಮಂದಿಗೆ ಕೊರೊನಾ - ಚಾಮರಾಜನಗರ ಕೊರೊನಾ ಕೇಸ್

ಪದವಿ ಕಾಲೇಜುಗಳು ಪುನಾರಂಭವಾದ ಬಳಿಕ ಆರೋಗ್ಯ ಇಲಾಖೆಯು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದ್ದು, ಇಂದು ಸಂಜೆ 5ರವರೆಗಿನ ಮಾಹಿತಿಯಂತೆ ಯಳಂದೂರು ಮತ್ತು ಕೊಳ್ಳೇಗಾಲ ಮೂಲದ 6 ಮಂದಿ ಪದವಿ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಯಾರಿಗೂ ರೋಗ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ.

chamarajanagar
ಚಾಮರಾಜನಗರ

By

Published : Nov 20, 2020, 9:15 PM IST

ಚಾಮರಾಜನಗರ: 6 ಮಂದಿ ಪದವಿ ವಿದ್ಯಾರ್ಥಿಗಳು ಸೇರಿದಂತೆ 20 ಮಂದಿಗೆ ಇಂದು ಕೋವಿಡ್ ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 77ಕ್ಕೆ ಇಳಿಕೆಯಾಗಿದೆ‌.

ಪದವಿ ಕಾಲೇಜುಗಳು ಪುನಾರಂಭವಾದ ಬಳಿಕ ಆರೋಗ್ಯ ಇಲಾಖೆಯು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ನಡೆಸುತ್ತಿದ್ದು, ಇಂದು ಸಂಜೆ 5ರವರೆಗಿನ ಮಾಹಿತಿಯಂತೆ ಯಳಂದೂರು ಮತ್ತು ಕೊಳ್ಳೇಗಾಲ ಮೂಲದ 6 ಮಂದಿ ಪದವಿ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಯಾರಿಗೂ ರೋಗ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ.

ಇನ್ನು 14 ಮಂದಿ ಐಸಿಯುನಲ್ಲಿದ್ದು, 31 ಮಂದಿ ಹೋಂ‌ ಐಸೋಲೇಷನ್​ನಲ್ಲಿ ಇದ್ದಾರೆ. 305 ಪ್ರಾಥಮಿಕ ಹಾಗೂ ದ್ವೀತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ABOUT THE AUTHOR

...view details