ಚಾಮರಾಜನಗರ: ಮರಳಿಕಾಯಿ ಬೀಜವನ್ನು ಬಾದಾಮಿ ಎಂದು ತಿಂದು ಐವರು ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನ ತಾಳವಾಡಿಯ ಗಾಜನೂರಲ್ಲಿ ನಡೆದಿದೆ. ಮಂಗಳವಾರ ಸಂಜೆ ಆಟ ಆಡುತ್ತಿದ್ದ ವೇಳೆ 11 ವರ್ಷದ ಆದರ್ಶ ಎಂಬಾತ ಸೇರಿ 7 ವರ್ಷದ ಇಬ್ಬರು ಬಾಲಕಿಯರು, ಬಾಲಕರು ಮರಳಿಕಾಯಿ ಬೀಜವನ್ನು ಜಜ್ಜಿ ತಿಂದಿದ್ದಾರೆ ಎನ್ನಲಾಗಿದೆ. ಬೀಜ ತಿನ್ನುತ್ತಿದ್ದಂತೆ ಗಂಟಲು ಹಿಡಿದುಕೊಂಡು ಅಸ್ವಸ್ಥರಾಗಿದ್ದಾರೆ.
ಚಾಮರಾಜನಗರ: ಬಾದಾಮಿ ಎಂದು ಮರಳಿಕಾಯಿ ಬೀಜ ತಿಂದ ಮಕ್ಕಳು ಅಸ್ವಸ್ಥ - Chamarajanagar Childrens sick news
ಆಡುತ್ತಿದ್ದ ಮಕ್ಕಳು ಬಾದಾಮಿಯೆಂದು ಮರಳಿ ಕಾಯಿ ತಿಂದು ಅಸ್ವಸ್ಥರಾಗಿರುವ ಘಟನೆ ಗಡಿಭಾಗ ತಮಿಳುನಾಡಿನ ತಾಳವಾಡಿಯ ಗಾಜನೂರಲ್ಲಿ ನಡೆದಿದೆ.
ಮರಳಿಕಾಯಿ ಬೀಜ ತಿಂದ ಮಕ್ಕಳು ಅಸ್ವಸ್ಥ
ಕೂಡಲೇ ಎಚ್ಚೆತ್ತ ಪಾಲಕರು ತಮಿಳುನಾಡಿನ ಆ್ಯಂಬುಲೆನ್ಸ್ ಮಾಡಿಕೊಂಡು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಸದ್ಯ ಐವರು ಮಕ್ಕಳು ಎಮರ್ಜೆನ್ಸಿ ವಾರ್ಡ್ನಲ್ಲಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಬಾಣಂತಿ ಸಾವು, ನಾಲ್ಕು ದಿನದ ಕಂದಮ್ಮ ಅನಾಥ.. ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಆರೋಪ