ಚಾಮರಾಜನಗರ:ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ನೂತನ ವಿಜಯನಗರ ಜಿಲ್ಲೆಯ ಸಿಇಒ ಆಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇವರ ಜಾಗಕ್ಕೆ ಕೆ.ಎಂ.ಗಾಯತ್ರಿ ಅವರನ್ನು ನಿಯುಕ್ತಿ ಮಾಡಲಾಗಿದೆ.
ಚಾಮರಾಜನಗರ ಸಿಇಒ ನೂತನ ವಿಜಯನಗರ ಜಿಲ್ಲೆಗೆ ವರ್ಗಾವಣೆ - ಚಾಮರಾಜನಗರ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ವರ್ಗಾವಣೆ
ಚಾಮರಾಜನಗರದ ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ಅವರನ್ನು ನೂತನ ವಿಜಯನಗರ ಜಿಲ್ಲೆಯ ಸಿಇಒ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.
ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್
ಕಳೆದ ಎರಡೂವರೆ ವರ್ಷಗಳಿಂದ ಜಿಪಂ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹರ್ಷಲ್ ಭೋಯರ್ ಕೊರೊನಾ ಸಮಯದಲ್ಲಿ ಪ್ರತಿ ಗ್ರಾಪಂಗೆ ಭೇಟಿಯಿತ್ತು ಜಾಗೃತಿ ಮೂಡಿಸಿ ಗಮನ ಸೆಳೆದಿದ್ದರು. ಇನ್ನು ನೂತನ ಸಿಇಒ ಆಗಿ ಬರುತ್ತಿರುವ ಕೆ.ಎಂ.ಗಾಯತ್ರಿ ಈ ಹಿಂದೆ ಎಡಿಸಿ, ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿದ್ದರು. ನಾಳೆ ಇಲ್ಲವೆ ಬುಧವಾರ ಗಾಯತ್ರಿಯವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.