ಕರ್ನಾಟಕ

karnataka

ETV Bharat / state

ಬಂಡೀಪುರ ಸಫಾರಿ ದರ ಈಗ ಡಬಲ್: ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರ ಆಕ್ರೋಶ - bandipur national park

ಬಂಡೀಪುರ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರ ಪ್ರವೇಶ ಶುಲ್ಕ ಹಾಗೂ ಸಫಾರಿ ದರವನ್ನು ಅರಣ್ಯ ಇಲಾಖೆ ಹೆಚ್ಚಿಸಿದೆ.

chamarajanagar
ಬಂಡೀಪುರ ಸಫಾರಿ ದರ ಈಗ ಡಬಲ್: ಪ್ರವಾಸಿಗರ ಆಕ್ರೋಶ

By

Published : Apr 3, 2021, 12:54 PM IST

ಚಾಮರಾಜನಗರ: ಏಕಾಏಕಿ ಬಂಡೀಪುರ ಸಫಾರಿ ದರವನ್ನು ಏರಿಕೆ ಮಾಡಿದ್ದು, ಪ್ರವಾಸಿಗರು ಅರಣ್ಯ ಇಲಾಖೆ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಮಧ್ಯಮ ವರ್ಗದವರಿಗೆ ಸಫಾರಿ ಎಟುಕದಂತಾಗಿದೆ.

ಈ ಹಿಂದೆ ಪ್ರವೇಶ ಶುಲ್ಕ 250 ರೂ., ಸಫಾರಿಗೆ 100 ರೂ. ಇತ್ತು. ಆದರೆ ಈಗ ಪ್ರವೇಶ ಶುಲ್ಕ 300 ರೂ. ಹಾಗೂ ಸಫಾರಿಗೆ 300 ರೂ. ತೆರಬೇಕಿದ್ದು 350 ರೂ.‌ನಲ್ಲಿ ವನ್ಯ ಸಂಪತ್ತು ನೋಡುತ್ತಿದ್ದ ಪ್ರವಾಸಿಗರು ಈಗ 600 ರೂ. ತೆರಬೇಕಿದೆ. ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ 500 ರೂ., ಸಫಾರಿಗೆ 500 ರೂ.ನಂತೆ ತಲಾ‌ ಓರ್ವರಿಗೆ 1000 ರೂ.‌ ಕೊಡಬೇಕೆಂದು ಅರಣ್ಯ‌ ಇಲಾಖೆ ಆದೇಶ ಹೊರಡಿಸಿದೆ.

ಸಫಾರಿಗೆ ಜಿಪ್ಸಿ ಬಾಡಿಗೆ 3 ಸಾವಿರದಿಂದ 3500 ರೂ., 9 ಸೀಟಿನ ಕ್ಯಾಂಪರ್ 5 ಸಾವಿರ ರೂ.ಯಿಂದ 7 ಸಾವಿರ ರೂ. ಆಗಿದೆ. ವಿದೇಶಿಗರಿಗೆ ಜಿಪ್ಸಿಗೆ 5 ಸಾವಿರ ಹಾಗೂ ಕ್ಯಾಂಪರ್​ಗೆ 7 ಸಾವಿರ ರೂ.ಗೆ ಏರಿಕೆಯಾಗಿದ್ದು, ಪಾರ್ಕಿಂಗ್ ಶುಲ್ಕ ಕೂಡ ಏರಿಕೆ ಮಾಡಲಾಗಿದೆ.

ಓದಿ:ಬಂಡೀಪುರದ ಕರಡಿಕಲ್ಲು ಬೆಟ್ಟದಲ್ಲಿ ಬೆಂಕಿ: ಅಪಾರ ಅರಣ್ಯ ಬೆಂಕಿಗಾಹುತಿ

ABOUT THE AUTHOR

...view details