ಚಾಮರಾಜನಗರ:ಗುತ್ತಿಗೆದಾರನಿಂದ 20 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ನಗರಸಭೆ ಎಇಇ, ಎಸಿಬಿ ಬಲೆಗೆ ಬಿದ್ದಿದ್ದಾರೆ.
20 ಸಾವಿರ ರೂ.ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಚಾಮರಾಜನಗರ ಎಇಇ - ಚಾಮರಾಜನಗರ ನಗರಸಭೆ ಎಇಇ, ಎಸಿಬಿ ಬಲೆಗೆ
ಗುತ್ತಿಗೆದಾರನಿಂದ 20 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ಚಾಮರಾಜನಗರ ನಗರಸಭೆ ಎಇಇ, ಎಸಿಬಿ ಬಲೆಗೆ ಬಿದ್ದಿದ್ದಾರೆ.
![20 ಸಾವಿರ ರೂ.ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಚಾಮರಾಜನಗರ ಎಇಇ](https://etvbharatimages.akamaized.net/etvbharat/prod-images/768-512-4784908-thumbnail-3x2-megha.jpg)
ಎಸಿಬಿ ಬಲೆಗೆ ಬಿದ್ದ ಚಾಮರಾಜನಗರ ಎಇಇ
ಎಸಿಬಿ ಬಲೆಗೆ ಬಿದ್ದ ಚಾಮರಾಜನಗರ ಎಇಇ
ಸತ್ಯಮೂರ್ತಿ, ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಶೋಯಬ್ ಖಾನ್ ಎಂಬ ಗುತ್ತಿಗೆದಾರನಿಗೆ ಎಸ್ಎಫ್ಡಿ ಹಣ ಬಿಡುಗಡೆ ಮಾಡಲು 20 ಸಾವಿರ ರೂ. ಲಂಚ ಕೇಳಿದ್ದರು ಎನ್ನಲಾಗಿದೆ.
ಈ ಕುರಿತು ಶೋಯಬ್ ಖಾನ್ ಎಸಿಬಿಗೆ ದೂರು ನೀಡಿದ್ದು, ಇಂದು ಹಣ ನೀಡುವ ನೆಪದಲ್ಲಿ ಎಇಇಯನ್ನು ಸಿಕ್ಕಿ ಬೀಳಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣ, ಸಿಪಿಐ ಶ್ರೀಕಾಂತ್, ದೀಪಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.