ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ(PM Narendra Modi) ರೀತಿಯ ನಾಯಕ ಬೇರೆ ಪಾರ್ಟಿಯಲ್ಲಿಲ್ಲ. ಮೋದಿ ಅವರಂಥ ಪಿಎಂ ಪ್ರಪಂಚದಲ್ಲೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(central minister shobha karandlaje) ಶ್ಲಾಘಿಸಿದರು.
ನಗರದಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ದಿನದಲ್ಲಿ 18 ತಾಸು ದುಡಿಯುತ್ತಾರೆ. ದೆಹಲಿಯಲ್ಲಿ ಕುಳಿತರೂ ಗ್ರಾಮೀಣ ಜನರ ಏಳಿಗೆ ಬಗ್ಗೆ ಯೋಚಿಸುತ್ತಾರೆ.
ಕಪ್ಪು ಚುಕ್ಕೆಯಿಲ್ಲದ, ಭ್ರಷ್ಟಾಚಾರ ಎಸಗದ, ಯಾವುದೇ ಆರೋಪಗಳಿಲ್ಲದ ನರೇಂದ್ರ ಮೋದಿ ಅವರನ್ನು ಮತ್ತಷ್ಟು ಬಲಪಡಿಸಲು ಈ ವಿಧಾನಪರಿಷತ್ ಚುನಾವಣೆಯಲ್ಲಿ ನಾವು ಗೆಲ್ಲಬೇಕಿದೆ ಎಂದರು.
ಇದನ್ನೂ ಓದಿ:ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿ ದಿವ್ಯಾಂಗರು ಜೀವನ ಸುಧಾರಿಸಿಕೊಳ್ಳಬೇಕು : ರಾಜ್ಯಪಾಲರ ಕರೆ
ವಿಧಾನ ಪರಿಷತ್ ಚುನಾವಣೆ ಮಿನಿ ಸಮರವಾಗಿದೆ. ನಮ್ಮ ಸಿದ್ಧಾಂತ, ಜನಪರವಾದ ಕಾನೂನುಗಳನ್ನು ಜಾರಿಗೊಳಿಸಬೇಕಾದರೆ ಮೇಲ್ಮನೆಯಲ್ಲಿ ಬಹುಮತ ಬೇಕೇಬೇಕು. ಹಾಗಾಗಿ, ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಪ್ರಪಂಚವೇ ಎದುರು ನೋಡುವ ಚುನಾವಣೆ :ಉತ್ತರಪ್ರದೇಶ ಚುನಾವಣೆ ಕೇವಲ ಭಾರತ ಮಾತ್ರವಲ್ಲ ಪ್ರಪಂಚವೇ ಎದುರು ನೋಡುವ ಚುನಾವಣೆಯಾಗಿದೆ. ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿ ಜೈ ಶ್ರೀರಾಮ್ ಘೋಷಣೆ ಕೂಗಿದರು.