ಕೊಳ್ಳೇಗಾಲ(ಚಾಮರಾಜನಗರ):ಲಾಕ್ಡೌನ್ ವಿಸ್ತರಣೆ ಹಿನ್ನೆಲೆ ಕೇಂದ್ರ, ರಾಜ್ಯ ಸರ್ಕಾರ ಬಡವರಿಗೆ ನೆರವಾಗಬೇಕು ಎಂದು ಶಾಸಕ ಎನ್.ಮಹೇಶ್ ಒತ್ತಾಯಿಸಿದ್ದಾರೆ. ಕೊರೊನಾದಿಂದ ದೇಶಾದ್ಯಂತ ಲಾಕ್ಡೌನ್ ಇದ್ದು, ಇದೀಗ ಎರಡು ಬಾರಿ ಲಾಕ್ಡೌನ್ ವಿಸ್ತರಣೆಯಾಗಿದೆ. ಇದೇ ರೀತಿ ಮೇ 3ಕ್ಕೂ ಮುಂದುವರೆದರೆ ಬಡವರಿಗೆ ತೊಂದರೆಯಾಗುವುದು ಖಚಿತ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡ ಕೂಲಿ ಕಾರ್ಮಿಕರಿಗೆ ನೆರವಾಗಬೇಕು ಎಂದಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಕ ವರ್ಗಕ್ಕೆ ನೆರವಾಗಬೇಕು: ಶಾಸಕ ಎನ್.ಮಹೇಶ್ - BSP leader N mahesh
ಲಾಕ್ಡೌನ್ ಜಾರಿಯಾದ ಬಳಿಕ ಬಡ ಕುಟುಂಬಗಳ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ಸೇರಿ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿವೆ. ಈ ನಡುವೆ ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ಇನ್ನಷ್ಟು ನೆರವಾಗಬೇಕಿದೆ ಎಂದಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಕ ವರ್ಗಕ್ಕೆ ನೆರವಾಗಬೇಕು: ಶಾಸಕ ಎನ್.ಮಹೇಶ್
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಕ ವರ್ಗಕ್ಕೆ ನೆರವಾಗಬೇಕು: ಶಾಸಕ ಎನ್.ಮಹೇಶ್
ಜನತಗೆ ಆಹಾರ ಭದ್ರತೆಯೂ ಮುಖ್ಯವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ನೆರವಾಗಬೇಕು ಎಂದ ಶಾಸಕರು, ಈ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ 10 ಸಾವಿರಕ್ಕೂ ಹೆಚ್ಚು ಕಿಟ್ಗಳನ್ನು ವಿಧಾನಸಭಾ ಕ್ಷೇತ್ರದಾದ್ಯಂತ ಶ್ರಮಿಕ ವರ್ಗಕ್ಕೆ ನೀಡುತ್ತಾ ಬಂದಿದ್ದೇನೆ. ಇದರಲ್ಲಿ ನನಗೆ ತೃಪ್ತಿಯಿಲ್ಲ. ಸರ್ಕಾರದ ಮಟ್ಟದಲ್ಲೂ ಅವರಿಗೆ ಸಹಾಯ ಮಾಡಿಸುವುದು ನನ್ನ ಉದ್ದೇಶವಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಮಂಗಳಮುಖಿಯರು ಹಾಗೂ ರೋಗಿಗಳಿಗೆ ಕಿಟ್ ವಿತರಿಸಿ ಸಂಕಷ್ಟಕ್ಕೆ ನೆರವಾಗಿದ್ದಾರೆ.