ಚಾಮರಾಜನಗರ:ಯಳಂದೂರುತಾಲೂಕು ಪಂಚಾಯಿತಿ ಸದಸ್ಯ ವೈ.ಕೆ.ಮೋಳೆ ನಾಗರಾಜು ಎಂಬವರ ವಿರುದ್ಧ ಯಳಂದೂರು ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.
ಅಂಬೇಡ್ಕರ್ ಪ್ರತಿಮೆ ವಿಚಾರಕ್ಕೆ ವಾಕ್ಸಮರ: ತಾ.ಪಂ. ಸದಸ್ಯನ ವಿರುದ್ಧ ಜಾತಿನಿಂದನೆ ಕೇಸ್ - Caste abuse case
ತಾಲೂಕು ಪಂಚಾಯಿತಿ ಸದಸ್ಯ ವೈ.ಕೆ.ಮೋಳೆ ನಾಗರಾಜು ವಿರುದ್ಧ ಯಳಂದೂರು ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.
ತಾಪಂ ಸದಸ್ಯನ ವಿರುದ್ಧ ಜಾತಿನಿಂದನೆ ಪ್ರಕರಣ
ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಲು ಅಂಬಳೆ ಮತ್ತು ಚಂಗಚಹಳ್ಳಿ ಗ್ರಾಮದಲ್ಲಿ 2016ರಲ್ಲೇ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಅದು ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ.
ಪ್ರತಿಮೆ ನಿರ್ಮಿಸುವ ಭರವಸೆ ನೀಡಿ ಈಗ ಕೈಬಿಟ್ಟಿರುವುದನ್ನು ಅಂಬಳೆ ಗ್ರಾಮದ ಮಹಾದೇವ ಎಂಬವರು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಗುರುವಾರ ಪ್ರಶ್ನಿಸಿದ್ದರು. ಈ ವೇಳೆ ತಾ.ಪಂ. ಸದಸ್ಯ ನಾಗರಾಜು ಅವರು ಜಾತಿನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.