ಚಾಮರಾಜನಗರ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆರೋಪಿಯೋರ್ವ ಮೃತಪಟ್ಟ ಘಟನೆ ಸಂಬಂಧ ಮೂವರು ವಿರುದ್ಧ ಪ್ರಕರಣ ದಾಖಲಾಗಿದೆ.
ಯಳಂದೂರು ಸಿಪಿಐ ಶಿವಮಾದಯ್ಯ, ಮಾಂಬಳ್ಳಿ ಠಾಣೆ ಪಿಎಸ್ಐ ಮಾದೇಗೌಡ ಹಾಗೂ ಕಾನ್ಸ್‌ಟೇಬಲ್ ಸೋಮಣ್ಣ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಮಗನನ್ನು ಹಿಂಸಿಸಿ ಕೊಂದಿದ್ದಾರೆಂದು ಆರೋಪಿಸಿ ಮೃತನ ತಾಯಿ ಮಹಾದೇವಮ್ಮ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ಒಬ್ಬಂಟಿಗರ ಮೇಲೆ ಡಕಾಯಿತಿಗೆ ಸ್ಕೆಚ್: ಯಳಂದೂರಲ್ಲಿ ಐವರು ಬಿಹಾರಿಗಳ ಬಂಧನ
ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ನಿಂಗರಾಜು (21) ಎಂಬಾತನ ವಿರುದ್ಧ ಅಪ್ರಾಪ್ತೆಯನ್ನು ಅಪಹರಿಸಿದ ದೂರು ದಾಖಲಾಗಿತ್ತು. ಮಂಗಳವಾರ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ಯವಾಗ ಆರೋಪಿ ಪರಾರಿಯಾಗಲು ಯತ್ನಿಸಿ, ಜೀಪಿನಿಂದ ಹಾರಿ ತೀವ್ರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.