ಕರ್ನಾಟಕ

karnataka

ETV Bharat / state

ಜಮೀನಿಗೆ ರಾತ್ರಿ ನೀರು ಹಾಯಿಸಿದ ಯಜಮಾನನಿಗೆ ಬೆಳಗಾಗುಷ್ಟರಲ್ಲಿ ಕಾದಿತ್ತು ಶಾಕ್​! - ಯಳಂದೂರು ತಾಲೂಕಿನ ಅಂಬಳೆಯಲ್ಲಿ ಬೆಂಕಿ

ರಾತ್ರಿ ಜಮೀನಿಗೆ ನೀರು ಹಾಯಿಸಿ ಬಂದ ಮಾಲೀಕ, ಬೆಳಗೆದ್ದು ನೊಡುವುದರೊಳಗೆ ಆಲೆಮನೆ, ಕಾರು, ಟ್ರ್ಯಾಕ್ಟರ್​​ ಎಲ್ಲವೂ ಸುಟ್ಟು ಭಸ್ಮವಾಗಿರುವ ಘಟನೆ ಯಳಂದೂರು ತಾಲೂಕಿನ ಅಂಬಳೆಯಲ್ಲಿ ನಡೆದಿದೆ.

Car, Tractor   burnt of fire
ಕಾರು, ಟ್ರ್ಯಾಕ್ಟರ್ ಭಸ್ಮ

By

Published : Dec 11, 2019, 6:27 PM IST

ಚಾಮರಾಜನಗರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಆಲೆಮನೆ, ಟ್ರಾಕ್ಟರ್ ಹಾಗೂ ಕಾರೊಂದು ಸುಟ್ಟು ಭಸ್ಮವಾಗಿರುವ ಘಟನೆ ಯಳಂದೂರು ತಾಲೂಕಿನ ಅಂಬಳೆಯಲ್ಲಿ ನಡೆದಿದೆ.

ಗ್ರಾಮದ ಶಿವಕುಮಾರಸ್ವಾಮಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಲೆಮನೆ ಹಾಗೂ ಅದರೊಳಗೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮತ್ತು ಕಾರು ಸುಟ್ಟು ಕರಕಲಾಗಿದೆ. ಮಂಗಳವಾರ ಮಧ್ಯರಾತ್ರಿವರೆಗೂ ಜಮೀನಿಗೆ ನೀರು ಹಾಯಿಸಿ ಶಿವಕುಮಾರಸ್ವಾಮಿ ತೆರಳಿದ್ದರು ಎಂದು ತಿಳಿದುಬಂದಿದ್ದು, ಮುಂಜಾನೆ ಈ ಅವಘಡ ಆಗಿದೆ ಎನ್ನಲಾಗ್ತಿದೆ.

ಅಂದಾಜು 5 ಲಕ್ಷ ರೂ. ನಷ್ಟವಾಗಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಶಿವಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details