ಕರ್ನಾಟಕ

karnataka

ETV Bharat / state

ಧಗಧಗಿಸಿದ ಕಾರಿನಲ್ಲಿ ಅಪರಿಚಿತ ವ್ಯಕ್ತಿ ಭಸ್ಮ.. - ಹಾಲಹಳ್ಳಿ-ನಿಟ್ರೆ ರಸ್ತೆ

ಹಾಲಹಳ್ಳಿ-ನಿಟ್ರೆ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರು ಬೆಂಕಿಗಾಹುತಿಯಾಗಿದ್ದು, ಅಪರಿಚಿತನೋರ್ವ ಸಜೀವ ದಹನವಾಗಿದ್ದಾನೆ.

ಕಾರು ಭಸ್ಮ

By

Published : Aug 9, 2019, 11:08 AM IST

ಚಾಮರಾಜನಗರ:ಸುಟ್ಟು ಕರಕಲಾದ ಕಾರಿನಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಸಂಪೂರ್ಣ ಸುಟ್ಟು ಬೂದಿಯಾಗಿರುವ ಘಟನೆ ಹಾಲಹಳ್ಳಿ-ನಿಟ್ರೆ ರಸ್ತೆಯಲ್ಲಿ ನಡೆದಿದೆ.

ಹೊತ್ತಿ ಉರಿದ ಕಾರಿನೊಳಗೆ ಬೂದಿಯಾದ ವ್ಯಕ್ತಿ..

ಅನುಮಾನಸ್ಪದವಾಗಿ ಕಾರು ಬೆಂಕಿಗಾಹುತಿಯಾಗಿದ್ದು, ಅಪರಿಚಿತನೋರ್ವ ಸಜೀವ ದಹನವಾಗಿರಬಹುದು. ಇಲ್ಲವೇ ದುಷ್ಕರ್ಮಿಗಳು ಕೊಲೆ ಮಾಡಿ ಕಾರಿನೊಂದಿಗೆ ಶವ ಸುಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಕಾರು ಮತ್ತು ವ್ಯಕ್ತಿಯನ್ನು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದು, ಹುಂಡೈ ಕಾರು ಎಂದು ಅಂದಾಜಿಸಲಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details