ಚಾಮರಾಜನಗರ:ಕಾಂಗ್ರೆಸ್ನವರದ್ದು ಎಲುಬಿಲ್ಲದ ನಾಲಗೆ, ಬಿಜೆಪಿ ವಿರುದ್ಧ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮೇಲ್ಮನೆ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ಮತಯಾಚಿಸಿ ಮಾತನಾಡಿ, ಸಾವಿರಾರು ಕೋಟಿ ರೂ. ದುಡ್ಡಿದೆ ಎಂದು 5ನೇ ಕ್ಲಾಸ್ ಪಾಸ್ ಆದವನನ್ನು ಬೆಂಗಳೂರಲ್ಲಿ ಅಭ್ಯರ್ಥಿಯನ್ನಾಗಿಸಿದ್ದಾರೆ, ಈ ಹಿಂದೆ ಕೈ ಅಭ್ಯರ್ಥಿಗಳು ಗೆದ್ದು ಕಡಿದು ಹಾಕಿದ್ದು ಅಷ್ಟರಲ್ಲೇ ಇದೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಅಂಬೇಡ್ಕರ್, ಗಾಂಧಿ ಹೆಸರು ಹೇಳಿಕೊಂಡು ಕಾಂಗ್ರೆಸ್ ತಿರುಗುತ್ತಿದೆ. ಅಂಬೇಡ್ಕರ್ ಅವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡದವರು, ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಇದೇ ಕಾಂಗ್ರೆಸ್ನವರು. ಅಂಬೇಡ್ಕರ್ ಆಶಯದಂತೆ ಸರ್ವರಿಗೂ ಒಳಿತನ್ನೂ ಮಾಡುತ್ತಿರುವವರು ಮೋದಿ ಎಂದರು.