ಕರ್ನಾಟಕ

karnataka

ETV Bharat / state

ಗೋಪಾಲಸ್ವಾಮಿ ಬೆಟ್ಟದಲ್ಲಿ ಜೀಪ್-ಬಸ್ ಮುಖಾಮುಖಿ: ತಪ್ಪಿದ ಅನಾಹುತ - himavad gopalaswamy hills latest news

ಗೋಪಾಲಸ್ವಾಮಿ ಬೆಟ್ಟದಲ್ಲಿ ಸರ್ಕಾರಿ ಬಸ್​ ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್​ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು.

hills
ಅಪಘಾತಕ್ಕೀಡಾದ ಬಸ್​

By

Published : Jul 11, 2021, 3:49 PM IST

ಚಾಮರಾಜನಗರ:ಎದುರಿನಿಂದ ಬಂದ ಜೀಪಿಗೆ ದಾರಿಕೊಡಲು ಹೋಗಿ ಜೀಪಿನ ಒಂದು ಭಾಗಕ್ಕೆ ಗುದ್ದಿ ಸಾರಿಗೆ ಸಂಸ್ಥೆ ಬಸ್ ಹಳ್ಳಕ್ಕೆ ಜಾರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಅಪಘಾತಕ್ಕೀಡಾದ ಬಸ್​

ಗೋಪಾಲಸ್ವಾಮಿ ಬೆಟ್ಟದಿಂದ ತಪ್ಪಲಿನತ್ತ 40 ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ಬಸ್ಸಿಗೆ ಎದುರಾಗಿ ಜೀಪೊಂದು ಬಂದಿದೆ. ಈ ವೇಳೆ ದಾರಿಕೊಡಲು ಮುಂದಾದ ವೇಳೆ ಜೀಪಿನ ಒಂದು ಭಾಗಕ್ಕೆ ಬಸ್ ಡಿಕ್ಕಿಯಾಗಿ ಹಳ್ಳಕ್ಕೆ ಇಳಿದಿದೆ. 40 ಮಂದಿ ಪ್ರಯಾಣಿಕರು ಸುರಕ್ಷಿತವಾಗಿದ್ದು ಜೀಪಿನ ಒಂದು ಭಾಗ ಜಖಂ ಆಗಿದೆ‌.

ಈಟಿವಿ ಭಾರತಕ್ಕೆ ಗುಂಡ್ಲುಪೇಟೆ ಕೆಎಸ್ಆರ್​ಟಿಸಿ ಡಿಪೋ ಮ್ಯಾನೇಜರ್ ಜಯಕುಮಾರ್ ಮಾಹಿತಿ ನೀಡಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ದಾರಿ ಕೊಡಲು ಮುಂದಾದ ವೇಳೆ ಈ ಅವಘಡ ಉಂಟಾಗಿದೆ. ಕ್ರೇನ್ ಸಹಾಯದಿಂದ ಬಸ್ ಅನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details