ಚಾಮರಾಜನಗರ: ಹಬ್ಬದ ಸಂಭ್ರಮದಲ್ಲಿ ಮನೆಗೆ ಪೂಜಾ ಸಾಮಗ್ರಿಗಳನ್ನು ಬೈಕಿನಲ್ಲಿ ಕೊಂಡೊಯ್ಯುತ್ತಿದ್ದ ಶಿಕ್ಷಕನಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಳಂದೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206 ರ ಯರಿಯೂರು-ಮದ್ದೂರು ಸೇತುವೆ ಬಳಿ ನಡೆದಿದೆ.
ಹಬ್ಬದ ಸಂಭ್ರಮದಲ್ಲಿದ್ದ ಶಿಕ್ಷಕ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು - ಬಸ್ ಡಿಕ್ಕಿ
ಶ್ರಾವಣ ಶನಿವಾರ ಹಬ್ಬ ಆಚರಿಸಲು ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯುವಾಗ ಕೊಳ್ಳೇಗಾಲದ ಕಡೆಯಿಂದ ಬಂದ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಶಾಲಾ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿಕ್ಷಕ ಕೇಶವಮೂರ್ತಿ ಸಾವು
ಮದ್ದೂರು ಗ್ರಾಮದ ಕೇಶವಮೂರ್ತಿ ಮೃತ ಶಿಕ್ಷಕ. ಕೇಶವಮೂರ್ತಿ ಶ್ರಾವಣ ಶನಿವಾರ ಹಬ್ಬ ಆಚರಿಸಲು ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯುವಾಗ ಕೊಳ್ಳೇಗಾಲದ ಕಡೆಯಿಂದ ಬಂದ ಸಾರಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.