ಕರ್ನಾಟಕ

karnataka

ETV Bharat / state

ಮೃತ ಅಭಿಮಾನಿ ರವಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್​ ವಿತರಿಸಿದ ಬಿಎಸ್​​ವೈ - ಸಿಎಂ ಬಿಎಸ್​ ಯಡಿಯೂರಪ್ಪ

ಮೃತ ಯುವಕನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಕಟ್ಟಾ ಅಭಿಮಾನಿಯಾಗಿದ್ದು, ಯಡಿಯೂರಪ್ಪ ರಾಜೀನಾಮೆ ವಿಚಾರ ತಿಳಿದು ಹಲವರ ಬಳಿ ಬೇಸರ ಹೊರಹಾಕಿದ್ದ ಎನ್ನಲಾಗಿತ್ತು. ಆದರೆ ಹೋಟೆಲ್​ನಲ್ಲಿ ಆತ ನೇಣಿಗೆ ಶರಣಾಗಿದ್ದ.

ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ

By

Published : Jul 30, 2021, 1:09 PM IST

ಚಾಮರಾಜನಗರ: ತಮ್ಮ ಅಧಿಕಾರ ತ್ಯಾಗದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಅಭಿಮಾನಿ ರವಿ ಮನೆಗೆ ಇಂದು ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಮೃತ ಅಭಿಮಾನಿ ರವಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್​ ವಿತರಿಸಿದ ಬಿಎಸ್​​ವೈ

ರವಿ ತಾಯಿ ದೇವಮ್ಮ ಅವರಿಗೆ 5 ಲಕ್ಷ ರೂ. ಚೆಕ್ ನೀಡಿದ ಯಡಿಯೂರಪ್ಪ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನ್ನ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖದ ಸಂಗತಿ.

ರವಿ ನನ್ನ ಮೇಲೆ ಇಟ್ಟಿದ್ದ ಪ್ರೀತಿ, ವಿಶ್ವಾಸದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ನನಗೆ ಆಘಾತ ತಂದಿದೆ. ಪ್ರೀತಿ,ವಿಶ್ವಾಸ ಭಕ್ತಿಯಾದರೇ ಈ ರೀತಿ ಘಟನೆ ಸಂಭವಿಸುತ್ತದೆ, ಈ ರೀತಿ ಆಗಬಾರದಿತ್ತು. ಮೃತ ರವಿ ಕುಟುಂಬಕ್ಕೆ ಜೀವನ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಇದನ್ನೂ ಓದಿ:BSY ಪದತ್ಯಾಗ, ಅಭಿಮಾನಿ ಪ್ರಾಣ ತ್ಯಾಗ.. ಕಂಬನಿ ಮಿಡಿದ ಯಡಿಯೂರಪ್ಪ

ABOUT THE AUTHOR

...view details