ಕರ್ನಾಟಕ

karnataka

ETV Bharat / state

ಸದನದ ಚರ್ಚೆಯಲ್ಲಿ ಭಾಗವಹಿಸದ ಬಿಎಸ್ಪಿ ಶಾಸಕ ಮಹೇಶ್..! - N Mahesh

ಕೊಳ್ಳೇಗಾಲ ಕ್ಷೇತ್ರದ ಬಿಎಸ್ಪಿ ಶಾಸಕ ಎನ್ ಮಹೇಶ್ ತಾವು ಇಂದು ನಡೆಯುತ್ತಿರುವ ಸದನ ಚರ್ಚೆಯಲ್ಲಿ ಹಾಜರಾಗದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಎಸ್ಪಿ ಶಾಸಕ ಮಹೇಶ್

By

Published : Jul 18, 2019, 1:02 PM IST

ಚಾಮರಾಜನಗರ:ಈವರೆಗೆ ನನ್ನ ಹೈಕಮಾಂಡ್​​ನಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ನಾನು ಸದನಕ್ಕೆ ಹೋಗಿಲ್ಲ ಎಂದು ಬಿಎಸ್ಪಿ ಶಾಸಕ ಎನ್ ಮಹೇಶ್ ಹೇಳಿದ್ದಾರೆ.

ಶಕ್ತಿ ಸೌಧದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದ್ದು ನಗರದಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಹೈಕಮಾಂಡ್, ಈವರೆಗೂ ನನಗೆ ಯಾವುದೇ ಆದೇಶ ನೀಡದ ಕಾರಣ ನಾನು ಸದನಕ್ಕೆ ಹೋಗಿಲ್ಲ. ನಮ್ಮ ಹೈಕಮಾಂಡ್​ಅನ್ನು ಈವರೆಗೂ ಜೆಡಿಎಸ್ ನಾಯಕರಾಗಲಿ, ಕಾಂಗ್ರೆಸ್ ನಾಯಕರಾಗಲಿ ಯಾರೂ ಸಹ ಭೇಟಿಯೇ ಮಾಡಿಲ್ಲ. ದೂರವಾಣಿ ಸಂಪರ್ಕ ಸಹ ಮಾಡಿಲ್ಲ. ಹಾಗಾಗಿ ನಾನು ಬೆಂಗಳೂರಿನ ನಮ್ಮ ಮನೆಯಲ್ಲೇ ಇದ್ದೇನೆ ಎಂದಿದ್ದಾರೆ.

ಬಿಎಸ್ಪಿ ಶಾಸಕ ಎನ್ ಮಹೇಶ್

ABOUT THE AUTHOR

...view details