ಕರ್ನಾಟಕ

karnataka

ETV Bharat / state

ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್​​ಸಿ ನರ್ಸಿಂಗ್ ಕೋರ್ಸ್: ಸಚಿವ ಸುರೇಶ್ ಕುಮಾರ್ - ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್

ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಈ ಕೋರ್ಸ್​ಗೆ 100 ಸೀಟುಗಳ ಪ್ರವೇಶವಿದೆ. ಎಲ್ಲಾ ಸೀಟುಗಳನ್ನು ಸರ್ಕಾರಿ ಕೋಟಾದ ಮೂಲಕವೇ ಭರ್ತಿ ಮಾಡಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Chamarajanagar Medical College
ಸಚಿವ ಸುರೇಶ್ ಕುಮಾರ್

By

Published : Feb 12, 2021, 7:12 PM IST

ಚಾಮರಾಜನಗರ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬಿಎಸ್​​ಸಿ ನರ್ಸಿಂಗ್ ಕೋರ್ಸ್ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಚಿವ ಸುರೇಶ್ ಕುಮಾರ್ ಪ್ರಕಟಣೆ

ಓದಿ: ಪ್ರಧಾನಿ ಮೋದಿ ಹೇಡಿ ಎಂದ ರಾಹುಲ್​ ಗಾಂಧಿ

ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಈ ಕೋರ್ಸ್​ಗೆ 100 ಸೀಟುಗಳ ಪ್ರವೇಶವಿದೆ. ಎಲ್ಲಾ ಸೀಟುಗಳನ್ನು ಸರ್ಕಾರಿ ಕೋಟಾದ ಮೂಲಕವೇ ಭರ್ತಿ ಮಾಡಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವ ಸುರೇಶ್ ಕುಮಾರ್ ಪ್ರಕಟಣೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅನುಮೋದನೆಯೊಂದಿಗೆ, ನರ್ಸಿಂಗ್ ಕಾಲೇಜಿಗೆ ಸೀಟುಗಳ ಭರ್ತಿ ಕಾರ್ಯ ಪ್ರಾರಂಭವಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಗಡಿ ಜಿಲ್ಲೆಯ ಶೈಕ್ಷಣಿಕ ಹಾಗೂ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಜಿಲ್ಲೆಗೆ ಬಿಎಸ್​​ಸಿ ನರ್ಸಿಂಗ್ ಕೋರ್ಸ್‍ನ್ನು ಈ ಸಾಲಿನಿಂದಲೇ ಪ್ರಾರಂಭ ಮಾಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ ನರ್ಸಿಂಗ್ ಕಾಲೇಜು ಆರಂಭಕ್ಕೆ ಆದೇಶ ಹೊರಡಿಸಿದೆ.

ABOUT THE AUTHOR

...view details