ಕರ್ನಾಟಕ

karnataka

ETV Bharat / state

4 ಬಾರಿ ಸಿಎಂ ಆಗಿ ಚಾಮರಾಜನಗರಕ್ಕೆ ಬರದಿದ್ರೂ ಒಂದ್ಸಾರಿಯೂ ಅವಧಿ ಪೂರೈಸಲಿಲ್ಲ.. ಮೌಢ್ಯಕ್ಕಿಲ್ಲ 3ಕಾಸಿನ ಬೆಲೆ.. - ಬಿ.ಎಸ್‌.ಯಡಿಯೂರಪ್ಪ

ಇಂದಿಗೂ ಕೂಡ ಯಡಿಯೂರಪ್ಪ ಜಿಲ್ಲೆಯ ವರ್ಚಸ್ವಿ ಹಾಗೂ ಪ್ರಭಾವ ಬೀರಬಲ್ಲ ನಾಯಕ. ಲಿಂಗಾಯತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬಿಎಸ್​ವೈ ಅವರಿಗೆ ಬೇರೆಲ್ಲ ನಾಯಕರಿಗಿಂತ ಇವರ ಅಭಿಮಾನಿ ಬಳಗ ಸ್ವಲ್ಪ ದೊಡ್ಡದು. ಗುಂಡ್ಲುಪೇಟೆಯಲ್ಲಿ ಶಾಸಕರಾಗಿ ನಿರಂಜನಕುಮಾರ್ ಆಯ್ಕೆಯಾಗಲು ಬಿಎಸ್‌ವೈ ಪ್ರಭಾವವೇ ಕಾರಣ..

BS Yediyurappa is not come to Chamarajanagar during his period
ನಾಲ್ಕು ಬಾರಿ ಸಿಎಂ ಆದರೂ ಚಾಮರಾಜನಗರಕ್ಕೆ ಬರದ ಬಿಎಸ್​ವೈ

By

Published : Jul 26, 2021, 8:11 PM IST

Updated : Jul 26, 2021, 9:10 PM IST

ಚಾಮರಾಜನಗರ :ನಾಲ್ಕು ಬಾರಿ ಸಿಎಂ ಆದರೂ ಜಿಲ್ಲಾ ಕೇಂದ್ರಕ್ಕೆ ಬಿ ಎಸ್‌ ಯಡಿಯೂರಪ್ಪ ಒಮ್ಮೆಯೂ ಭೇಟಿ ಕೊಡಲಿಲ್ಲ. ಆದರೆ, ಅವರ ಪ್ರಭಾವ, ವರ್ಚಸ್ಸು ಮಾತ್ರ ಗಡಿ ಜಿಲ್ಲೆಯಲ್ಲಿ ಅಪಾರವಾಗಿದೆ. ಮೂಢನಂಬಿಕೆಗೆ ಜೋತು ಬಿದ್ದು ಚಾಮರಾಜನಗರಕ್ಕೆ ಸಿಎಂ ಬಿಎಸ್​ವೈ ಬರುತ್ತಿಲ್ಲ ಎಂಬ ಆರೋಪಗಳು, ಗೋಬ್ಯಾಕ್ ಸಿಎಂ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ಈ ಬಾರಿ ನಡೆಯಿತು‌‌.

ವಿಪಕ್ಷ ನಾಯಕರಾಗಿದ್ದ ವೇಳೆ ಚಾಮರಾಜನಗರ ಜಿಲ್ಲಾ ಪ್ರವಾಸ ಮಾಡಿ ಜಿಲ್ಲೆಯಲ್ಲೆ ಸುದ್ದಿಗೋಷ್ಠಿ ಕೂಡ ನಡೆಸಿದ್ದರು. ಆದರೆ, ಮುಖ್ಯಮಂತ್ರಿ ಆದ ಬಳಿಕ ಇಲ್ಲಿಗೆ ಬರುವ ಮನಸ್ಸು ಮಾಡಲಿಲ್ಲ. ಕಳೆದ ನ.26ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದೇ ಈ ಅವಧಿಯ ಸಿಎಂ ಆಗಿ ಅವರ ಮೊದಲ ಮತ್ತು ಕೊನೆಯ ಭೇಟಿಯಾಗಿದೆ‌. ಯಡಿಯೂರಪ್ಪ ಅವರ ಅಧಿಕಾರದುದ್ದಕ್ಕೂ ಅವರು ಚಾಮರಾಜನಗರಕ್ಕೆ ಬರಲಿಲ್ಲ. ಆದ ಕಾರಣ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಟೀಕೆಗಳು ಕೇಳಿ ಬಂದಿವೆ.

ಎರಡು ವರ್ಷದಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?:

ಕೊರೊನಾ, ಪ್ರವಾಹದಿಂದ ಆರ್ಥಿಕ ಚಟುವಟಿಕೆ ಮಕಾಡೆ ಮಲಗಿದ ಪರಿಣಾಮವೇನೋ ಚಾಮರಾಜನಗರಕ್ಕೆ ಎರಡು ವರ್ಷಗಳ ಅವಧಿಯಲ್ಲಿ ದೊಡ್ಡ ಯೋಜನೆ, ಅನುದಾನ ಸಿಕ್ಕಿಲ್ಲ. ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾದ 13.84 ಕೋಟಿ ವೆಚ್ಚದ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. 109.93 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ಕಾಮಗಾರಿಗಳು ಪ್ರಗತಿಯಲ್ಲಿವೆ.

ಜಿಲ್ಲೆಯಲ್ಲಾದ ಅಭಿವೃದ್ಧಿ ಕಾರ್ಯಗಳು:

  • ಚಾಮರಾಜನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅತ್ಯಾಧುನಿಕ ₹1.79 ಕೋಟಿ ವೆಚ್ಚದಲ್ಲಿ ಆರ್​ಟಿಪಿಆರ್​ ಪ್ರಯೋಗಾಲಯ ನಿರ್ಮಾಣ
  • ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಬಳಿ ಆಮ್ಲಜನಕ ಘಟಕಗಳ ನಿರ್ಮಾಣ ಹಾಗೂ ಹಾಸಿಗೆ ಸಾಮರ್ಥ್ಯ ಹೆಚ್ಚಳ
  • 2021ರ ಮಾರ್ಚ್‍ನಲ್ಲಿ ಮಂಡಿಸಲಾದ ರಾಜ್ಯ ಬಜೆಟ್‍ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಸಫಾರಿ ಸೌಲಭ್ಯ ಆರಂಭ
  • ಬಿಆರ್​ಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಆನೆ ಶಿಬಿರ ನಿರ್ಮಾಣಕ್ಕೆ 1 ಕೋಟಿ ರೂ.
  • ಅರಿಸಿನ ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ.

ಜಿಲ್ಲೆಯ ವರ್ಚಸ್ವಿ ನಾಯಕ :

ಇಂದಿಗೂ ಕೂಡ ಯಡಿಯೂರಪ್ಪ ಜಿಲ್ಲೆಯ ವರ್ಚಸ್ವಿ ಹಾಗೂ ಪ್ರಭಾವ ಬೀರಬಲ್ಲ ನಾಯಕ. ಲಿಂಗಾಯತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬಿಎಸ್​ವೈ ಅವರಿಗೆ ಬೇರೆಲ್ಲ ನಾಯಕರಿಗಿಂತ ಇವರ ಅಭಿಮಾನಿ ಬಳಗ ಸ್ವಲ್ಪ ದೊಡ್ಡದು.

ಗುಂಡ್ಲುಪೇಟೆಯಲ್ಲಿ ಶಾಸಕರಾಗಿ ನಿರಂಜನಕುಮಾರ್ ಆಯ್ಕೆಯಾಗಲು ಸಿಎಂ ಪ್ರಭಾವವೇ ಕಾರಣ. ಅವರು ಕೆಜೆಪಿ ಪಕ್ಷ ಕಟ್ಟಿದ್ದಾಗಲೂ ಬಲು ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳು ಯಡಿಯೂರಪ್ಪ ಅವರನ್ನು ಹಿಂಬಾಲಿಸಿದ್ದು ಇದಕ್ಕೆ ಸಾಕ್ಷಿ.

ಓದಿ: 2 ವರ್ಷ ಅಧಿಕಾರ ಸಿಕ್ಕರೂ ಅಡಿಗಡಿಗೂ ಅಡ್ಡಿಗಳು.. ಅಗ್ನಿ'ಪಥ'ದೊಳಗೂ ಅರಳಿದ ಆಶಾವಾದಿ 'ಶಿಕಾರಿ'ಯೂರಪ್ವ..

Last Updated : Jul 26, 2021, 9:10 PM IST

ABOUT THE AUTHOR

...view details