ಚಾಮರಾಜನಗರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ 64 ಕೆರೆಗಳಲ್ಲಿ ಮೂರು ಕೆರೆಗಳಷ್ಟೇ ಭರ್ತಿಯಾಗಿ ಕೋಡಿ ಬಿದ್ದಿದ್ದು, 37 ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ.
ಈ ಕುರಿತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ 3 ಕೆರೆಗಳು ಕೋಡಿ ಬಿದ್ದಿದ್ದು, ಗುಂಡ್ಲುಪೇಟೆಯ ಕೆಂಪುಸಾಗರ ಹಾಗೂ ಬೇರಂಬಾಡಿ ಕೆರೆ ಒಂದೆರಡು ದಿನಗಳಲ್ಲಿ ಕೋಡಿ ಬೀಳುತ್ತವೆ. ಚಾಮರಾಜನಗರ ತಾಲೂಕಿನ 14, ಗುಂಡ್ಲುಪೇಟೆ ತಾಲೂಕಿನ 15, ಯಳಂದೂರಿನ 2, ಕೊಳ್ಳೇಗಾಲದ 6 ಕೆರೆಗಳು ಸೇರಿ ಒಟ್ಟು 37 ಕೆರೆಗಳು ಖಾಲಿ ಬಿದ್ದಿದ್ದು, ಕಬಿನಿಯಿಂದ ನೀರು ತುಂಬಿಸಬೇಕಿದೆ ಎಂದು ತಿಳಿಸಿದ್ದಾರೆ.