ಚಾಮರಾಜನಗರ: ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿಜಿಲ್ಲೆಯ ಒಳಬರುವ ವಾಹನಗಳಿಗೆ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿವೆ.
ಗಡಿಜಿಲ್ಲೆಯಲ್ಲಿ ಕೊರೊನಾ ತಡೆಗೆ ಕ್ರಮ: ಅಂತರರಾಜ್ಯ ವಾಹನಗಳಿಗೆ ಶೀಘ್ರದಲ್ಲೇ ನಿಷೇಧ - ಭಾರತದಲ್ಲಿ ಕರೋನಾ ವೈರಸ್
ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಚಾಮರಾಜನಗರಕ್ಕೆ ಅಂತರರಾಜ್ಯ ವಾಹನಗಳ ಪ್ರವೇಶವನ್ನು ಬಂದ್ ಮಾಡುವ ಸಾಧ್ಯತೆಯಿದೆ.
ಗಡಿಜಿಲ್ಲೆಯಲ್ಲಿ ಕೊರೊನಾ ತಡೆಗೆ ಕ್ರಮ
ಇಂದು ಸಂಜೆ ಅಥವಾ ನಾಳೆಯಿಂದಲೇ ಚಾಮರಾಜನಗರಕ್ಕೆ ಅಂತರರಾಜ್ಯ ವಾಹನಗಳ ಪ್ರವೇಶವನ್ನು ಬಂದ್ ಮಾಡುವ ಸಾಧ್ಯತೆಯಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಬಹುದು ಎನ್ನಲಾಗುತ್ತಿದೆ.
ಈಗಾಗಲೇ ಪೊಲೀಸ್ ಇಲಾಖೆ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು ಬಂಡೀಪುರ, ಮೂಳೆಹೊಳೆ, ಪುಣಜನೂರು ಚೆಕ್ಪೋಸ್ಟ್ಗಳಲ್ಲಿ ಹಾದುಹೋಗುವ ಬೇರೆ ರಾಜ್ಯಗಳ ವಾಹನಗಳನ್ನು ತಡೆಯಲಾಗುತ್ತಿದೆ.