ಚಾಮರಾಜನಗರ:ಸೂಪರ್ ಸ್ಟಾರ್ ರಜಿನಿ ಬಳಿಕ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಲ್ಲಿ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡು ಜಲ ಸಾಹಸ ನಡೆಸಿದ್ದಾರೆ.
ಕಲ್ಕರೆ ಅರಣ್ಯ ವಲಯದ ರಾಂಪುರ ಆನೆ ಶಿಬಿರದ ಸಮೀಪ ಎದೆಮಟ್ಟದ ನೀರಿನಲ್ಲಿ ಹಗ್ಗದ ಸಹಾಯದಿಂದ ಈಜಿ ಮೈನವಿರೇಳಿಸುವ ಸಾಹಸ ಮಾಡಿದ್ದು, ಬಳಿಕ ಸಾಹಸಿ ಬೇರ್ ಗ್ರಿಲ್ಸ್ ಜೊತೆಗೂಡಿ ಸಂವಾದ ನಡೆಸಿದ್ದಾರೆ.