ಕರ್ನಾಟಕ

karnataka

ETV Bharat / state

ಶಾಲೆಗೆ ಹೋಗದಿದ್ದರೇ ಜಾತಿಯಿಂದಲೇ ದೂರ.. ಉಪ್ಪಾರ ಸಮುದಾಯದ ದಿಟ್ಟ ನಿರ್ಧಾರ! - ಶಾಲೆ ಬಿಟ್ಟ 100ಕ್ಕೂ ಹೆಚ್ಚು ಮಕ್ಕಳು

ಶಿಕ್ಷಣದ ಮಹತ್ವ ಅರಿತ ಹಿರಿಯರೇ ತಮ್ಮ ಸಮುದಾಯ ಶಿಕ್ಷಣದಿಂದ ವಂಚಿತವಾಗಬಾರದು ಎಂದು ದೃಢ ನಿಲುವೊಂದನ್ನು ತೆಗೆದುಕೊಂಡಿದ್ದಾರೆ.

Meeting with Uppara Community
ಉಪ್ಪಾರ ಸಮುದಾಯದ ನಾಯಕರೊಂದಿಗೆ ಸಭೆ

By

Published : Feb 15, 2023, 1:53 PM IST

ಉಪ್ಪಾರ ಸಮುದಾಯದ ದಿಟ್ಟ ನಿರ್ಧಾರ

ಚಾಮರಾಜನಗರ:ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಸಮುದಾಯವೇ ಆ ಕುಟುಂಬದಿಂದ ದೂರಾಗಲಿದೆ. ಶಿಕ್ಷಣಕ್ಕಾಗಿ ಈ ರೀತಿ ದಿಟ್ಟ ನಿಲುವೊಂದನ್ನು ಚಾಮರಾಜನಗರದ ಉಪ್ಪಾರ ಸಮುದಾಯ ತೆಗೆದುಕೊಂಡಿದೆ. ತಮ್ಮ ಸಮಾಜ ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಿತರಾಗಬೇಕು, ಉನ್ನತ ವ್ಯಾಸಂಗ ಮಾಡಬೇಕೆಂಬ ನಿಟ್ಟಿನಲ್ಲಿ ಚಾಮರಾಜನಗರದ ಉಪ್ಪಾರ ಸಮುದಾಯವು ದಿಟ್ಟ ನಿಲುವು ತೆಗೆದುಕೊಂಡಿದ್ದು ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿಸಲು ಸಮುದಾಯದ ಯಜಮಾನರುಗಳು ಈ ಕಠಿಣ ನಿಲುವು ತೆಗೆದುಕೊಂಡಿದ್ದಾರೆ.

ಮರಳಿ ಶಾಲಗೆ ಬರುವಂತೆ ಜಾಗೃತಿ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವರ್ಗ-1 ರ ಅಡಿಯಲ್ಲಿ 158 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಇವರಲ್ಲಿ ಉಪ್ಪಾರ ಸಮುದಾಯದವರೇ ಹೆಚ್ಚಿದ್ದು ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆಯು ಉಪ್ಪಾರ ಸಮಯದಾಯದ ಯಜಮಾನರುಗಳ ಸಭೆ ನಡೆಸಿ ಜಾಗೃತಿ ಮೂಡಿಸುವಂತೆ ಜೊತೆಗೆ ಮರಳಿ ಶಾಲೆಗೆ ಕಳುಹಿಸುವಂತೆ ಸಭೆಯಲ್ಲಿ ತಿಳಿಸಿದೆ.

ಶಾಲೆ ಬಿಟ್ಟ 100ಕ್ಕೂ ಹೆಚ್ಚು ಮಕ್ಕಳು:ಚಾಮರಾಜನಗರದಲ್ಲಿ 40, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಲ್ಲಿ 39 ಹೀಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಣದ ಮಹತ್ವ ಅರಿತಿರುವ ಉಪ್ಪಾರ ಸಮುದಾಯದ ಮುಖಂಡರು ಯಾರೂ ಕೂಡ ಕಡ್ಡಾಯ ಶಿಕ್ಷಣದಿಂದ ವಂಚಿತರಾಗಬಾರದೆಂದು ಮಂಗಳವಾರದಿಂದಲೇ ಮನೆ ಮನೆಗೆ ತೆರಳಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಶಾಲೆಗೆ ಕಳುಹಿಸದಿದ್ದರೇ ಸಮಯದಾಯವೇ ದೂರ:ಚಾಮರಾಜನಗರ ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದ ಸ್ಥಳೀಯ ಪಂಚಾಯತಿಗಳು ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದ್ದು, ಸಮುದಾಯದ ಯಜಮಾನರುಗಳ ಮಾತನ್ನು ಯಾರೂ ಮೀರುವುದಿಲ್ಲ. ಒಂದು ವೇಳೆ, ತಪ್ಪಿದರೆ ಅವರದೇ ಆದ ದಂಡ ಹಾಗೂ ಷರತ್ತುಗಳನ್ನು ಪಾಲಿಸಬೇಕಿದೆ.

ಗಡಿ ಯಜಮಾನರುಗಳು (ಓರ್ವ ಗಡಿ ಯಜಮಾನ ಕನಿಷ್ಠ 18 ಊರುಗಳಿಗೆ ಸಮಯದಾಯದ ಮುಖಂಡ) ಮನೆ ಮನೆಗೆ ತೆರಳಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿ, ಒಂದು ವೇಳೆ ಶಾಲೆಗೆ ಕಳುಹಿಸದಿದ್ದರೇ ನಿಮ್ಮ‌ ಮನೆಯ ಶುಭ-ಅಶುಭ ಕಾರ್ಯಗಳಿಗೆ ತಾವುಗಳು ಬರುವುದಿಲ್ಲ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದಾರೆ.

ಬಾಲ್ಯ ವಿವಾಹಕ್ಕೂ ಬ್ರೇಕ್: ಉಪ್ಪಾರ ಸಮಯದಾಯದಲ್ಲಿ ಅತಿಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿದ್ದವು. ಇದರಿಂದ, ಎಚ್ಚೆತ್ತ ಸಮಯದಾಯವು ಕಳೆದ ಎರಡು ವರ್ಷಗಳ ಹಿಂದೆ ಯಾರೂ ಕೂಡ ಬಾಲ್ಯ ವಿವಾಹವನ್ನು ಮಾಡಬಾರದು, ಬಾಲ್ಯ ವಿವಾಹ ಮಾಡಿದ್ದೇ ಆದರೆ ಸಮುದಾಯ ಸಹಾಯ ಮಾಡುವುದಿಲ್ಲ. ಯಜಮಾನರುಗಳು ವೀಳ್ಯ ಶಾಸ್ತ್ರಕ್ಕೆ ಬರುವುದಿಲ್ಲ. ಕಾನೂನು ಕ್ರಮಕ್ಕೆ ತಾವು ಜವಾಬ್ದಾರರಲ್ಲ ಎಂದು ನಿಲುವು ತೆಗೆದುಕೊಂಡ ಪರಿಣಾಮ ಉಪ್ಪಾರ ಸಮುದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಬಾಲ್ಯ ವಿವಾಹ ನಿಂತಿದೆ.

ಈಗ ಶಿಕ್ಷಣಕ್ಕೂ ಕಠಿಣ ಅಸ್ತ್ರ ಪ್ರಯೋಗ ಮಾಡಿದ್ದು, ಯಶ ಕಾಣುವ ನಿರೀಕ್ಷೆ ಇದೆ. ತಮ್ಮ ಸಮಯದಾಯ ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂದು ಪಣ ತೊಟ್ಟಿರುವ ಉಪ್ಪಾರ ಸಮಯದಾಯದ ನಡೆ ಮಾದರಿಯಾಗಿದೆ.

ಇದನ್ನೂ ಓದಿ:ಮದುವೆ ಸಮಾರಂಭದಲ್ಲಿ ಸಾಮಾಜಿಕ ಜಾಗೃತಿ‌ ಮೂಡಿಸಿ ವಿಭಿನ್ನ ಮದುವೆಯಾದ ಜೋಡಿ..

ABOUT THE AUTHOR

...view details