ಚಾಮರಾಜನಗರ: ಧೀರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಜಿಲ್ಲಾ ಕುರುಬರ ಸಂಘದ ವತಿಯಿಂದ ಅದ್ಧೂರಿಯಾಗಿ ನಗರದ ಖಾಸಗಿ ಸಭಾಂಗಣದಲ್ಲಿ ನಡೆಸಲಾಯಿತು.
ಚಾಮರಾಜನಗರ: ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ ರಕ್ತದಾನ - ಉಚಿತ ಆರೋಗ್ಯ ತಪಾಸಣೆ
ಚಾಮರಾಜನಗರದಲ್ಲಿ ಸಂಗಳ್ಳಿ ರಾಯಣ್ಣ ಜಯಂತಿಯ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಿದ್ದು, ಯುವಕರು ಸೇರಿದಂತೆ ಹಲವಾರು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂಗೊಳ್ಳಿ ರಾಯಣ್ಣ ಜಯಂತಿಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮ
ದೇಶಕ್ಕಾಗಿ ಬಲಿದಾನ ಮಾಡಿದ ರಾಯಣ್ಣನ ಹೆಸರಿನಲ್ಲಿ ನೂರಾರು ಮಂದಿ ಯುವಕರು ರಕ್ತದಾನ ಮಾಡಿದರು. ಜೊತೆಗೆ, ಜಾತ್ಯಾತೀತವಾಗಿ ಯುವ ಜನತೆ ಮತ್ತು ಹಿರಿಯ ನಾಗರಿಕರಿಗೆ ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ರಾಯಣ್ಣ ಹುಟ್ಟಿದ್ದು ಸ್ವಾತಂತ್ರ್ಯ ದಿನದಂದು, ಹುತಾತ್ಮರಾದದ್ದು ಗಣತಂತ್ರ ದಿನದಲ್ಲಾದ್ದರಿಂದ ಎರಡೂ ರಾಷ್ಟ್ರೀಯ ಹಬ್ಬಗಳ ಸಂಭ್ರಮದಲ್ಲಿ ರಾಯಣ್ಣ ಮರೆಯಾಗುತ್ತಿದ್ದಾರೆಂದು ಮನಗಂಡು ಈ ಕಾರ್ಯಕ್ರಮ ಆಯೋಜಿಸಲಾಯಿತು ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಜಶೇಖರ್ ತಿಳಿಸಿದರು.