ಚಾಮರಾಜನಗರ: ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ರೋಟರಿ ಸಂಸ್ಥೆ ಸಂಯುಕ್ತವಾಗಿ ನಗರದ ರೋಟರಿ ಭವನದಲ್ಲಿ ಮಹಿಳಾ ಸ್ವಯಂ ಸೇವಕರಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುವತಿಯರಿಂದ ರಕ್ತದಾನ ಶಿಬಿರ ಆಯೋಜನೆ... ಮಹಿಳೆಯರೂ ರಕ್ತ ನೀಡಬಹುದೆಂದು ಜಾಗೃತಿ - ಯುವತಿಯರಿಂದ ರಕ್ತದಾನ ಶಿಬಿರ
ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ರೋಟರಿ ಸಂಸ್ಥೆ ಸಂಯುಕ್ತವಾಗಿ ಚಾಮರಾಜನಗರದಲ್ಲಿ ಮಹಿಳಾ ಸ್ವಯಂ ಸೇವಕರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
70ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಿದರು. ಈ ವೇಳೆ ಮಾತನಾಡಿದ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ , ಚಾಮರಾಜನಗರದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಿದೆ ಎಂದು ತಿಳಿದಿದ್ದರಿಂದ ಮತ್ತು ಯುವತಿಯರು ಕೂಡ ರಕ್ತದಾನ ಮಾಡಲು ಮುಂದಾಗಬೇಕೆಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸೋದರಿ ನಿವೇದಿತಾ ಪ್ರತಿಷ್ಠಾನದ ರಾಜ್ಯ ಸಂಚಾಲಕಿ ಶ್ವೇತಾ ಮಾತನಾಡಿ, ಪ್ರತಿಷ್ಠಾನಕ್ಕೆ 5 ವರ್ಷವಾಗುತ್ತಿರುವುದರಿಂದ 5 ಆಯಾಮಗಳಲ್ಲಿ ಚಟುವಟಿಕೆ ಕೈಗೊಂಡಿದ್ದು, ಇದರಲ್ಲಿ ಯುವತಿಯರಿಂದ ರಕ್ತದಾನವೂ ಒಂದಾಗಿದೆ. ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಕೊಪ್ಪಳದಿಂದಲೂ ಸ್ವಯಂ ಸೇವಕರು ಆಗಮಿಸಿದ್ದು, ರಕ್ತದಾನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
TAGGED:
ಯುವತಿಯರಿಂದ ರಕ್ತದಾನ ಶಿಬಿರ