ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸ್ಥಾನ ಇದೇ ಮೊದಲ ಬಾರಿಗೆ ಬಿಜೆಪಿಗೆ ಒಲಿದಿದ್ದು, ನೂತನ ಆಧ್ಯಕ್ಷರಾಗಿ ವೈ.ಸಿ ನಾಗೇಂದ್ರ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ತಾಲೂಕಿನ ಕುದೇರಿನಲ್ಲಿರುವ ಚಾಮುಲ್ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಶಾಸಕ ಪುಟ್ಟರಂಗಶೆಟ್ಟಿ ಪುತ್ರಿ ಶೀಲಾ ಪುಟ್ಟರಂಗಶೆಟ್ಟಿ ವಿರುದ್ಧ ಒಂದು ಮತದ ಅಂತರದಲ್ಲಿ ವೈ.ಸಿ ನಾಗೇಂದ್ರ ಅವರು ಗೆದ್ದು ಬೀಗಿದ್ದಾರೆ. ಬಿಜೆಪಿ ಆಂತರಿಕ ಒಪ್ಪಂದದಂತೆ ಮೊದಲ ಎರಡೂವರೆ ವರ್ಷ ನಾಗೇಂದ್ರ ಅಧ್ಯಕ್ಷರಾಗಿರಲಿದ್ದು, ಇನ್ನುಳಿದ ಎರಡೂವರೆ ವರ್ಷ ಹೆಚ್.ಎಸ್ ಬಸವರಾಜು ಅವರು ಅಧ್ಯಕ್ಷರಾಗಲಿದ್ದಾರೆ.