ಚಾಮರಾಜನಗರ:ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಯಿಂದ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಕನಸು ಚಿಗುರೊಡೆದಿದೆ ಎಂದು ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಹೇಳಿದರು. ಸಂತೇಮರಹಳ್ಳಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು,ಯತೀಂದ್ರ ಮಾತಿನಲ್ಲೇ ಒಂದು ಉತ್ತರ ಸಹ ಇದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಎನ್ನುವ ಪ್ರಶ್ನಾರ್ಥಕವಿದೆ, ಮುಖ್ಯಮಂತ್ರಿ ಪುತ್ರ ಯತೀಂದ್ರ ಮಾತನಾಡುತ್ತಾರೆ ಅಂದರೆ ಅಲ್ಲಿಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅವರಿಗೆ ಕೂಡ ಡೌಟ್ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಅಂತ: ಯತೀಂದ್ರ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ, ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಅಂತ ಗೊತ್ತಾಗಿದೆ, ಗೆದ್ದರೆ ಎನ್ನುವ ಪ್ರಶ್ನೆ ಇದೆ. ಅಂದ್ರೆ ಅವ್ರು ಗೆಲ್ಲಲ್ಲ ಅಂತ ಆಯ್ತು. ಹಾಗಿದ್ರೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಲೆಕ್ಕಾಚಾರ ಇದೆ. ಯತೀಂದ್ರ ಅವರ ಮಾತಲ್ಲಿ ಎಷ್ಟು ಗೊಂದಲಗಳಿವೆ ಎನ್ನುವುದು ಗೊತ್ತಾಗುತ್ತೆ ಎಂದು ಟಾಂಗ್ ನೀಡಿದರು.
ಯತೀಂದ್ರ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುವುದರಿಂದ ಡಿಕೆಶಿ ಸಿಎಂ ಆಗುವ ಕನಸು ಚಿಗರುತ್ತೆ, ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ರೆ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಅನ್ನುವದಾದರೆ, ಡಿ ಕೆ ಶಿವಕುಮಾರ್ ಏನ್ಮಾಡ್ಬೇಕು ? ಡಿ ಕೆ ಶಿವಕುಮಾರ್ ಇಸ್ ನಾಟ್ ಬಾದರ್ ಎಬೌಟ್ ಪಾರ್ಲಿಮೆಂಟ್ ಎಲೆಕ್ಷನ್, ಸಿದ್ದರಾಮಯ್ಯ ಇಸ್ ಬಾದರ್ ಎಬೌಟ್ ಪಾರ್ಲಿಮೆಂಟ್ ಎಲೆಕ್ಷನ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಟ್ವೀಟ್:ಇನ್ನು ಮೋದಿ ಗಾಡನಿದ್ರೆಯಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಹೃದಯ ಮುಟ್ಟಿ ಹೇಳಲಿ, ಮೋದಿ ಕೆಲಸ ಮಾಡುತ್ತಿಲ್ಲ, ನಿದ್ರೆ ಮಾಡುತ್ತಿದ್ದಾರೆ ಎಂದು, ಈ ರೀತಿ ಹೇಳಿಕೆಗಳಿಂದ ಮೋದಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಲಿದೆ, ಇದರ ಜೊತೆಗೆ ಸಿದ್ದರಾಮಯ್ಯ ಅವರು ಗೌರವ ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದರು.