ಚಾಮರಾಜನಗರ:ಪ್ರಧಾನಿ ನರೇಂದ್ರ ಮೋದಿ ಅವರು ಮಹಾಮಾರಿ ಕೊರೊನಾ ಬಗ್ಗೆ ಎಚ್ಚರ ಇರಲಿ ಎನ್ನುತ್ತಿದ್ದರೇ, ಇತ್ತಾ ಅವರದ್ದೇ ಪಕ್ಷದ ಶಾಸಕರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದಂತೆ ವರ್ತಿಸಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆಯಿತು.
ಗದ್ದುಗೆ ಹಿಡಿದ ಖುಷಿಯಲ್ಲಿ ಸಾಮಾಜಿಕ ಅಂತರ ಮಾಯ: ಪುನಾರವರ್ತನೆ ಮಾಡಿದ ಬಿಜೆಪಿ ಶಾಸಕ - chamarajanagar news
ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಈ ಹಿನ್ನೆಲೆ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನಕುಮಾರ್, ಮಾಸ್ಕ್ ಧರಿಸದೇ ಸಾಮಾಜಿಕ ಅಂತರವೂ ಇಲ್ಲದೇ ಸಂಭ್ರಮಾಚರಣೆ ನಡೆಸಿದ್ದಾರೆ.
ಗದ್ದುಗೆ ಹಿಡಿದ ಖುಷಿಯಲ್ಲಿ ಸಾಮಾಜಿಕ ಅಂತರ ಮಾಯ
ಗುರುವಾರ ನಡೆದ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಈ ಹಿನ್ನೆಲೆ ಭರ್ಜರಿ ರೋಡ್ ಶೋ ನಡೆಸಿದ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನಕುಮಾರ್, ಮಾಸ್ಕ್ ಧರಿಸದೇ ಸಾಮಾಜಿಕ ಅಂತರವೂ ಇಲ್ಲದೇ ಸಂಭ್ರಮಾಚರಣೆ ನಡೆಸಿದ್ದಾರೆ.
ಬುದ್ಧಿ ಹೇಳಬೇಕಾದ ಶಾಸಕರೇ ಹೀಗೆ ಮಾಡಿದ್ರೆ, ಜನರ ಪರಿಸ್ಥಿತಿ ಏನೆಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ಹಿಂದೆ ನಿಗಮ ಮಂಡಲಿ ಅಧ್ಯಕ್ಷರಾದಗಲೂ ಮಾಸ್ಕ್, ಸಾಮಾಜಿಕ ಅಂತರ ಗಾಳಿಗೆ ತೂರಿ ರೋಡ್ ಶೋ ನಡೆಸಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು.